RSS

ಶ್ರೀಹರಿಯ ಸತ್ಯ ಸಂಕಲ್ಪ

ಓಂದಾನೊಂದು ಕಾಲದಲ್ಲಿ ನರಕಲೋಕಾಧಿಪತಿಯಾದ ಯಮಧರ್ಮರಾಜ ಶ್ರೀಹರಿಯ ದರ್ಶನಾರ್ಥವಾಗಿ ವೈಕುಂಟಕ್ಕೆ ಹೊರಟನು. ವೈಕುಂಟದ ಮುಖದ್ವಾರದಮುಂದೆ ಗರುಡದೇವರು ದ್ವಾರಪಾಲಕನಾಗಿ ನಿಂತಿದ್ದ. ಯಮಧರ್ಮರಾಜ ಬಂದ ವಿಚಾರವನ್ನು ಗರುಡದೇವರಿಗೆ ತಿಳಿಸಿದ. ಗರುಡದೇವರು ವೈಕುಂಟದವೊಲಗೆ ಪ್ರವೇಶಮಾಡಿ ಯಮಧರ್ಮರಾಜನ ಆಗಮನವನ್ನು ತಿಳಿಸಿದ. ಶ್ರೀಹರಿಯು ದರ್ಶನವುಕೊಡಲು ಅಪ್ಪಣೆ ಕೊಟ್ಟ. ಗರುಡದೇವರು ಹಿಂತಿರಿಗಿ ಬರುವಾಗ ಒಂದು ವಿಶೇಷವಾದ ಸನ್ನಿವೇಶವನ್ನು ಗುರ್ತಿಸಿದ. ಅದೇನಂದರೇ ನರಕಲೋಕಾಧಿಪತಿಯಾದ ಯಮಧರ್ಮರಾಯ ತದೇಕವಾಗಿ ವೈಕುಂಟದ ಮುಖದ್ವಾರಮೇಲೆ ಕುಳುತಿದ್ದ ಒಂದು ಪಕ್ಷಿಯನ್ನು ನೋಡುತಿದ್ದ. ಗರುಡದೇವರು ಶ್ರೀಹರಿಯನ್ನು ಬೇಟಿಯಾಗಲು ಶ್ರೀಹರಿಯ ಸಮ್ಮತಿಯನ್ನು ಯಮಧರ್ಮರಾಯನಿಗೆ ತಿಳಿಸಿದ. ಯಮಧರ್ಮರಾಯ ವೈಕುಂಟುದ್ವಾರದಿಂದ ಶ್ರೀಹರಿಯನ್ನು ದರ್ಶಿಸಲು ವೊಳಗೆ ಪ್ರವೇಶಮಾಡಿದ.

          ಗರುಡದೇವರು ಕ್ಷಣಕಾಲ ತಾನು ನೋಡಿದ ಸನ್ನಿವೇಶದಬಗ್ಗೆ ಆಲೋಚನೆ ಮಾಡಿದ. “ಯಮಧರ್ಮರಾಯ ಏಕೆ ಆ ಪಕ್ಷಿಯನ್ನು ತದೇಕ ದೃಷ್ಠಿಯಿಂದ ನೋಡುತ್ತಿದ್ದ?” ಅಂದರೇ ಅದರ ಪ್ರಣವನ್ನು ತಗಿಯಲಿ ಆಲೋಚನೆ ಮಾಡುತ್ತಿದ್ದಾನೆಯೆಂತು ಗ್ರಹಿಸಿದ. ಗರುಡದೇವರು “ಹೇಗಾದರೂ ಈ ಪಕ್ಷಿಯುನ್ನು ರಕ್ಷಣೆ ಮಾಡಬೇಕೆಂದು ಸಂಕಲ್ಪಿಸಿದ. ವೇಗವಾಗಿ ಆಪಕ್ಷಿಯನ್ನು ಹಿಡದು ಸಪ್ತ ಸಮುದ್ರಗಳನ್ನು ದಾಟಿ, ಒಂದುವ್ರುಕ್ಷದಮೇಲೆ ಇಟ್ಟ. ವೇಗವಾಗಿ ಯಾದಾಸ್ಥಾನಕ್ಕೆ ಸೇರಿದ.

          ಯಮಧರ್ಮರಾಯ ಶ್ರೀಹರಿಯಜೊತೆ ಸಂಭಾಷಣಮಾಡಿ ಹಿಂತಿರಿಗಿ ನರಕಲೋಕಕ್ಕೆ ಪ್ರಯಾಣವಾದ. ವೈಕುಂಟದ ಮುಖ ದ್ವಾರಕ್ಕೆ ಬಂದು ಮುಖದ್ವಾರದಮೇಲಿನ ಭಾಗವನ್ನು ನೋಡಲಾರಂಭಿಸಿದ. ಗರುಡದೇವರ “ಏನು ನೋಡುತ್ತಿರುವಿರಿ?” ಅಂತ ಪ್ರಶ್ನೆಮಾಡಿದ. ಯಮಧರ್ಮರಾಯ ಕ್ಷಣಕಾಲ ಆಲೋಚನೆ ಮಾಡಿ ನಗುನಗುತ್ತಾ ಹೊರಟ. ಗರುಡದೇವರು ಯಮಧರ್ಮರಾಯನ ನಗುತ್ತಿರುವದು ಅರ್ಥವಾಗದೇ ಮತ್ತೆ ಪ್ರಶ್ನೆ ಮಾಡಿದ. “ನಿಮ್ಮ ಈ ನಗುವಿಕೆಗೆ ಅರ್ಥವೇನು?. ಆಗ ಯಮಧರ್ಮರಾಯ ವಿಷಯವನ್ನು ವಿವರಿಸಿದ. “ಜಗದೊಡಯನಾದ ಶ್ರೀಹರಿ ಮುಖದ್ವಾರದ ಮೇಲೆ ಕುಳಿತಿದ್ದ ಪಕ್ಷಿ ಸಪ್ತಸಮುದ್ರಗಳ ಆಹೆ ಒಂದು ವೃಕ್ಷದಮೇಲೆ ಕುಳುತ್ತಿದ್ದ ಬೆಕ್ಕೆಗೆ ಆಹಾರವಾಗಬೇಕೆಂದು ಸಂಕಲ್ಪಿಸಿದ್ದ”, ಅದು ಹೇಗೆ ನಡಯುತ್ತೆ ಅಂತ ಆಲೋಚನೆ ಮಾಡಿದ್ದೆ. ಭಗವಂತ ಆ ಕೆಲಸವನ್ನು ನಿನ್ನ ಮುಖಾಂತರವಾಗಿ ಮಾಡಿಸಿದ್ದಾನೆ ಅಂತ ನಗುನಗುತ್ತಾ ಹೇಳಿದ.

          ಗರುಡದೇವರು ಭಗವಂತನ ಸಂಕಲ್ಪ ಅರಿಯದೇ ತಾನು ರಕ್ಷಣಮಾಡಬೇಕೆಂದು ಮಾಡಿದ ಕಾರ್ಯವನ್ನು ಯಮಧರ್ಮರಾಯನಿಗೆ ವಿವರಿಸಿದ. ಯಮಧರ್ಮರಾಯ “ ಭಗವಂತನದು ಸತ್ಯ ಸಂಕಲ್ಪ, ನಾವೆಲ್ಲರೂ ನಿಮಿತ್ತ ಮಾತ್ರರು. ಕಾಲಧರ್ಮವನ್ನು-ಸೃಷ್ಠಿದರ್ಮವನ್ನು ನಿಯಂತ್ರಣಮಾಡುವಶಕ್ತಿ ಭಗವಂತನಿಗೆ ಮಾತ್ರ ಇದೆ. ಇದು ತಿಳಿದು ನಮಗೆ ನಿರ್ದೇಶಿಸಿದ ಕಾರ್ಯವನ್ನು ಮಾಡಬೇಕೆಂದು” ಗರುಡದೇವರಿಗೆ ಹಿತೋಪದೇಶ ಮಾಡಿ ಹೊರಟ.

          ನಮ್ಮ ನಿತ್ಯಜೀವನದಲ್ಲಿ ಕೂಡಾ ನಮ್ಮ ಪ್ರಾರ್ಬ್ಧಕ್ಕೆ ತಕ್ಕಂತೆ ಭಗವಂತ ಫಲವನ್ನು ಕೊಡುತ್ತಾನೆ. ಅದನ್ನ ನಿಯಂತ್ರಣೆ ಮಾಡುವಶಕ್ತಿ ಭಗವಂತನಿಗೆ ಮಾತ್ರ ಇದೆ ಬೇರೇಯಾರಿಗೂ ಇದು ಸಾಧ್ಯವಿಲ್ಲ. ಆದಕಾರಣ ನಡಯುವದಲ್ಲಾ ನಮ್ಮ ಕರ್ಮಕ್ಕೆ ತಕ್ಕಂತೆ ಕಾಲಾನುಗುಣವಾಗಿ ಭಗವಂತ ಫಲಕೊಡುತ್ತಾನೆ. ಭಗವಂತನಿಗೆ ವ್ಯತಿರೇಕವಾಗಿ ಮನಸ್ಸಿನಲ್ಲಿ ಸಂಕಲ್ಪ ಮಾಡೂವದರಿಂದ ಮಾನಶ್ಶಾಂತಿಗೆ ದೂರವಾಗುತ್ತೇವೆ. ಹರಿಯಸಂಕಲ್ಪವೇ ಸತ್ಯಸಂಕಲ್ಪ.

ಯತೋಧರ್ಮಃ ತತೋಜಯಃ

ಶ್ರೀಕೃಷ್ಣಾರ್ಪಣಮಸ್ತು

Advertisements
 

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

 
%d bloggers like this: