RSS

ಅಕ್ಷಯ ತೃತೀಯ (09-May-2016)

04 May

11154746_10202359142539571_6090614876843582115_o

     ಅಕ್ಷಯ ತೃತೀಯ ಪರ್ವದಿನ ಸುವರ್ಣಾದಿ ಆಭರಣಗಳನ್ನು ಕೊಳ್ಳುವುದಕ್ಕೆ ಯಾವ ಶಾಸ್ತ್ರದ ಆಧಾರವು ಇಲ್ಲ. ಅಕ್ಷಯ ತೃತೀಯ ದಿನ ಧಾನಗಳಿಗೆ ಅಕ್ಷಯಫಲ ಕೊಡುವುದು ಅಂತ ಶಾಸ್ತ್ರವು ತಿಳಿಸಿದೆ. ಅಕ್ಷಯತೃತೀಯದ ದಿನ ವಿಶೇಷವಾಗಿ “ಉಧಕುಂಭದಾನ” ವನ್ನು ಮಾಡತಕ್ಕದ್ದು. ಬೇಸಿಗೆ ತಾಪ ಅಧಿಕವಿರುವುದರಿಂದ ಅದರ ಉಪಶಮನಕ್ಕಾಗಿ ತಣ್ನನ ನೀರನ್ನು ಧಾನಮಾಡುವುದು ವಿಶೇಷ. ಅಕ್ಷಯ ತೃತೀಯದ ದಿನ ಮಾಡುವ ಪೂಜೆ, ಜಪ, ಪಾರಾಯಣಾದಿಗಳು ಅಕ್ಷಯ ಫಲವನ್ನು ಕೊಡುವುದು. ಈಗ ನಡೆಯುತ್ತಿರುವುದು ಕಲಿಯುಗ ಆದ ಕಾರಣ ಸುವರ್ಣಾಧಿ ಆಭರಣಗಳಲ್ಲಿ ಕಲಿಪುರುಷನ ವಿಶೇಷ ಸನ್ನಿದಾನ ವಿರುತ್ತದೆ ಅಂತ ಪರೀಕ್ಷಿತ ರಾಜನ ವೃತ್ತಾಂತದಲ್ಲಿ ಶ್ರೀಮಧ್ಬಾಗವತದಲ್ಲಿ ಕೇಳಿದ್ದೇವೆ. ಸುವರ್ಣಾದಿ ಆಭರಣಗಳು ಅಕ್ಷಯತೃತೀಯದ ಪ್ರಯುಕ್ತವಾಗಿ ಕೊಳ್ಳುವುದರಿಂದ ಕಲಿಯ ಆವೇಶ ಅಕ್ಷಯವಾಗುವುದು ಯೆನ್ನುವ ಸತ್ಯವನ್ನು ಮರೆಯಬಾರದು. ಅಕ್ಷಯ ತೃತೀಯದ ಪರ್ವದಿನ ಸುವರ್ಣಾದ ಆಭರಣಗಳು ಕೊಳ್ಳುವುದು ಅಂತ ಯಾವ ಶಾಸ್ತ್ರದ ವುಲ್ಲೇಕವೂ ಇಲ್ಲ. ಇದು ಕೇವಲ ವ್ಯಾಪಾರದೃಷ್ಠಿಯೀಂದ ಹೇಳಲ್ಪಟ್ಟ ಆಧುನಿಕ ವಿಚಾರ.

ಯಂ ಶಾಸ್ತ್ರ ವಿಧಿ ಮುತ್ಸೃಜ್ಯ ವರ್ತತೇ ಕಾಮಕಾರಕಾತ್
ನ ಸ ಸಿದ್ಧಿ ಮವಾಪ್ನೋತಿ ನ ಸುಖಂ ನ ಪರಾಂಗತಿಂ ||

     – ಶಾಸ್ತ್ರವು ತಿಳಿಸಿದ ವಿಚಾರವನ್ನು ಬಿಟ್ಟು ತಮಗೆ ಇಚ್ಚೆಬಂದಂತೆ ಮಾಡುವ ಕರ್ಮಗಳಿಂದ ಯಾವ ಸಿದ್ಧಿಯು ಆಗುವುದಿಲ್ಲ, ಯಾವ ಸುಖವು ಸಿಗುವುದಿಲ್ಲ, ಯಾವ ಮೋಕ್ಷವು ಹತ್ತರ ಬರುವುದಿಲ್ಲ ಅಂತ ಗೀತಾಚಾರ್ಯ ಮೇಲಿನ ಶ್ಲೋಕದ ಮೂಲಕ ತಿಳಿಸಿದ್ದಾನೆ ಅಲ್ಲವೇ. ಹಾಗಾಗಿ ಈ ಅಕ್ಷಯ ತೃತೀಯದ ಪರ್ವದಿನ ಶಾಸ್ತ್ರವಿಹಿತವಾದ “ಉದಕುಂಭ ಧಾನವನ್ನು” (ನೀರು ಸಹಿತವಾದ ತಂಬಿಗೆ) ಮಾಡತಕ್ಕದ್ದು.

Advertisements
 
Leave a comment

Posted by on 04/05/2016 in Vedic Astrology

 

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

 
%d bloggers like this: