RSS

25-Jan-2015 VEDIC ASTROLOGY WORKSKP – Summery

25 Jan

ಒಂದೇ ಜಾತಕವನ್ನು ಹತ್ತು ಜನ ಜ್ಯೋತಿಷಪಂಡಿತರು ಪರಿಶೀಲನೆ ಮಾಡಿದಾಗ ಒಂದೇರೀತಿಯಾದ ಫಲ ಏಕೆ ಬರುವುದಿಲ್ಲ?

ಮನುಷ್ಯನ ಸ್ವಭಾವ, ಅಲೋಚನೆಮಾಡುವ ವಿಧಾನ ಭಿನ್ನವಾದದ್ದು. ಒಬ್ಬರ ಅಲೋಚನೆಮಾಡುವ ವಿಧಾನ ಇನ್ನೊಬ್ಬರಿಗೆ ಸಮಾನವಾಗುವುದಿಲ್ಲ. ವ್ಯತ್ಯಾಸವಿರುತ್ತದೆ. ಒಂದು ಗಣಿತದ ಉದಾಹರಣೆನೋಡಿದಾಗ 9 x 2 = 18 ಇದು ಸತ್ಯ. ಜ್ಯೋತಿಷಶಾಸ್ತ್ರದಲ್ಲಿ ಈ ಸೂತ್ರಗಳು ಅನ್ವಯವಾಗುವುದಿಲ್ಲ. ಒಂದೇ ಗ್ರಹಸ್ಥಿತಿ ಇರುವ ಯಾವ ಎರಡು ಜಾತಕಗಳ ಫಲ ಒಂದೇ ರೀತಿಯಲ್ಲಿರುವುದಿಲ್ಲ. ಇದಕ್ಕೆ ಕಾರಣ ಜ್ಯೋತಿಶ್ಕನ ಆಲೋಚನಾ ವಿಧಾನ ಮತ್ತು ಕರ್ಮಸಿದ್ಧಾಂತ. ಪ್ರಾಚೀನಕಾಲದಲ್ಲಿ ಮಹರ್ಷಿಗಳು, ಪಂಡಿತರು ಒಂದೇರೀತಿಯಲ್ಲಿರುವ ವಾತಾವರಣದಲ್ಲಿ ವಿದ್ಯೆಯನ್ನು ಅಧ್ಯಯನಮಾಡಿದ್ದರು. ಆದಕಾರಣ ಅವರ ಜ್ಯೋತಿಷಶಾಸ್ತ್ರ ಅಧ್ಯಯನ ಮತ್ತು ಅಭ್ಯಾಸ ಒಂದೇ ರೀತಿಯಲ್ಲಿ ಇರುತ್ತಿತ್ತು. ಈಗಿನ ಪರಿಸ್ಥಿತಿ ನೋಡಿದರೇ ಪ್ರಾಚೀನಕಾಲಕ್ಕೆ ಭಿನ್ನವಾದ ವಾತವರಣ ನೆಲಗೊಂಡಿದೆ. ಪ್ರತಿಯೊಬ್ಬರೂ ಬೇರೆಬೇರೆ ವಾತಾವರನದಲ್ಲಿ ಬೇರೆಬೇರೆ ವಿಷಯಗಳಲ್ಲಿ ವಿದ್ಯಾಭ್ಯಾಸ ಮಾಡಿದ್ದ್ದಾರೆ. ಜ್ಯೋತಿಷಶಾಸ್ತ್ರವನ್ನು ಪ್ರಥಮ ಕರ್ಥವ್ಯವಿದ್ಯಯಾಗಿ ಯಾರೂ ಅಭ್ಯಾಸಮಾಡುತ್ತಿಲ್ಲ. ವಯಸ್ಸುಮೀರಿದವರು ಕಾಲಕ್ಷೇಪದ ಸಲವಾಗಿ, ಜಾತಕಫಲ ಹೇಳುವುದರಿಂದ ಬರುವ ಕೀರ್ಥಿ, ಧನಸಂಪಾದನೆಗಾಗಿ ಈ ಶಾಸ್ತ್ರವನ್ನು ಆತ್ಯಾಧುನಿಕತೆಯ ಪ್ರಮಾಣಗಳಿಂದ ಅಧ್ಯಯನ ಮಾಡುತ್ತಿದ್ದಾರೆ. ಜ್ಯೋತಿಷಶಾಸ್ತ್ರದಲ್ಲಿರುವ ಗ್ರಹ, ರಾಶಿ, ನಕ್ಷತ್ರಗಳು ಮೊದಲಾದ ಖಗೋಳಶಾಸ್ತ್ರಕ್ಕೆ ಸಂಭಂದಪಟ್ಟಿರುವ ವಿಷಯವನ್ನು ಮಾತ್ರ ಅಭ್ಯಾಸಮಾಡುತ್ತಿದ್ದಾರೆ. ವೇದ, ಉಪನಿಷತ್ಸಾರಭೂತವಾದ ಧರ್ಮವನ್ನು, ಕರ್ಮಸಿದ್ಧಾಂತವನ್ನು, ಭಗವಂತನ ಅಸ್ತಿತ್ವವನ್ನು, ಸದಾಚಾರವನ್ನು, ವರ್ಣಾಶ್ರಮಧರ್ಮದಿಂದ ಕೂಡಿದ ಜ್ಯೋತಿಷಶಾಸ್ತ್ರವನ್ನು ಪ್ರತ್ಯೇಕವಾಗಿ ಯಾರೂ ಅಧ್ಯಯನ ಮಾಡುತ್ತಿಲ್ಲ. ಇಲ್ಲಿ ತಿಳಿಯಬೇಕಾದ ವಿಷಯವೇನೆಂದರೇ ಜ್ಯೋತಿಷಶಾಸ್ತ್ರ ಆಧುನಿಕ ವಿಜ್ಞಾನಶಾಸ್ತ್ರವಲ್ಲ. ಏಕೆಂದರೇ ಆಧುನಿಕ ಶಾಸ್ತ್ರಕ್ಕೆ ಮುಖ್ಯವಾದದ್ದು ಸೂತ್ರ (Formula). ಒಂದು ಸೂತ್ರವನ್ನು ಯಾವ ಪ್ರದೇಶದಲ್ಲಾದರೂ ಎಷ್ಟುಬಾರಿಯಾದರೂ ಪ್ರಯೋಗಿಸಿದರೇ ಒಂದೇ ರೀತಿಯಾದ ಫಲವನ್ನು ಕೊಡಬೇಕು. ಉದಾಹರಣೆಗೆ (a+b)2=a2+2ab+b2 ಈ ಸೂತ್ರವನ್ನು ಯಾವಸಂಧರ್ಭದಲ್ಲಾದರೂ, ಯಾವ ಪ್ರದೇಶದಲ್ಲಾದರೂ ನೋಡಿದರೇ ಒಂದೇ ಉತ್ತರ ಸಿಗುತ್ತದೆ. ಆದರೇ ಜ್ಯೋತಿಷಶಾಸ್ತ್ರದ ಮೂಲಕ ಜಾತಕದಲ್ಲಿ ತಿಳಿಸುವ ಫಲ ದೇಶ,ಕಾಲ, ಪರಿಷ್ತಿತಿಗಳಿಗೆ ಮತ್ತು ಮನುಷ್ಯಮಾಡಿದ ಪ್ರಾಚೀನಕರ್ಮಗಳಿಗೆ ಅನುಗುಣವಾಗಿ ಬದಲಾಗುತಿರುತ್ತದೆ. ಒಂದೇ ಕಾಲದಲ್ಲಿ ಹುಟ್ಟಿದ ಅವಳಿಮಕ್ಕಳ (Twins) ಜಾತಕ ಒಂದೇ ಆಗಿದ್ದರೂ ಅವರ ಸ್ವಭಾವ, ಬುದ್ಧಿ, ಆಲೋಚನಾಧೋರಣಿಯಲ್ಲಿ ವ್ಯತ್ಯಾಸ ಕಾಣಿಸುತ್ತದೆ.
ಇನ್ನು ಮೇಲಿನ ಪ್ರಶ್ನೆಬಗ್ಗೆ ನೋಡೋಣ. ಒಬ್ಬ ವೈಧೀಕಬ್ರಾಹ್ಮಣ, ವೈದ್ಯ, ನ್ಯಾಯವಾದಿ, ವ್ಯಾಪರಗಾರ ಮೊದಲಾದ ಬೇರೆಬೇರೆ ವೃತ್ತಿಯನ್ನು ನಿರ್ವರ್ತನೆ ಮಾಡುವ ಜನರು ಜ್ಯೋತಿಷಶಾಸ್ತ್ರವನ್ನು ಅಧ್ಯಯನಮಾಡಿದಾಗ ಅವರ ಆಲೋಚನೆಗೆ ಅನುಗುಣವಾಗಿ ಜ್ಯೋತಿಷಶಾಸ್ತ್ರದ ಸೂತ್ರಗಳನ್ನು ಉಪಯೋಗಿಸಿ ಜಾತಕದ ಫಲವನ್ನು ಹೇಳುತ್ತಾರೆ. ಅದರಕಾರಣವಾಗಿ ಜಾತಕ ವಿಶ್ಲೇಷಣೆ ಭಿನ್ನವಾಗಿರುತ್ತದೆ. ಫಲ ಹೇಳುವುದಕ್ಕೆ ಕೇವಲ ಗ್ರಹಗತಿಗಳ ಸಂಬಂದ ಸಾಲದು. ಜಾತಕವನ್ನು ಪರಿಶೀಲನೆಮಾಡುವಾಗ ಮನಸ್ಸನ್ನು ಯಾವರೀತಿ ಹೊಂದಿಸಬೇಕು ಯೆಂಬುವ ವಿಷಯವನ್ನು, ವಿಚಕ್ಷಣೆಯನ್ನು ಹೊಂದಿರಬೇಕು. ಅದಕ್ಕಾಗಿಯೇ ನಮ್ಮ ಪ್ರಾಚೀನರು ಜ್ಯೋತಿಷಶಾಸ್ತ್ರವನ್ನು ಒಂದು ಪವಿತ್ರವಾದಶಾಸ್ತ್ರವಾಗಿ ಭಾವಿಸಿ ತಮ್ಮ ಉಪಾಸನಾಬಲ, ದೈವಬಲದಿಂದ ಜಾತಕಫಲವನ್ನು ವಿಶ್ಲೇಷಣೆ ಮಾಡುತ್ತಿದ್ದರು. ಹಾಗಾಗಿ ಜ್ಯೋತಿಷಶಾಸ್ತ್ರಾಧ್ಯಯನಕ್ಕೆ, ಫಲ ನಿರ್ದಾರಣೆಗೆ ದೈವಬಲ ಅಂಟಿರಬೇಕು. ದೈವಬಲದಿಂದ ಮಾತ್ರ ಜಾತಕಫಲ ನಿರ್ದಾರಣೆ ಸಾಧ್ಯ.

ಈ ಅತ್ಯಾಧುನೆಕೆಯ ಕಾಲದಲ್ಲಿ (Modern Times) ಜ್ಯೋತಿಷಶಾಸ್ತ್ರದ ಅವಶ್ಯಕತೆ

ಎಲ್ಲ ಸಂಸಾರವ್ಯವಹಾರಗಳನ್ನು ತೊರದು ಕಾಡಿಗೆಹೋಗಿ ತಪಸ್ಸಲ್ಲಿ ಮಘ್ನವಾಗಿ, ಪ್ರಾಪಂಚಿಕವಿಷಯಗಳಲ್ಲಿ ಮಮತೆ-ಅನುರಾಗಗಳಿಗೆ ಸದಾಕಾಲ ದೂರವಾಗಿ ಮೋಕ್ಷವನ್ನು ಪಡೆಯುವ ಬಯಕೆಯಲ್ಲಿರುವ ಋಷಿಗಳು ಸಹಿತ ಜ್ಯೋತಿಷ್ಕನೊಬ್ಬನು ಕಾಣಿಸಿದರೇ ಸಾಕು ಅವರಮೂಲಕ ಬಹಳ ವಿಷಯಗಳನ್ನು ತಿಳಿಯುವುದರಲ್ಲಿ ಉತ್ಸಾಹಿತರಾಗಿರುತ್ತಾರೆ. ಸಂಸಾರವು ಜಡವೆಂದು ಉತ್ಸಾಹವನ್ನು ಕಳೆದುಕೊಂಡ ಸಾಧಾರಣ ಮನುಷ್ಯನು ಮತ್ತು ಐಹಿಕ ಭೋಗಗಳಿಗೆ ಒಳಗಾಗಿ ಯಂತ್ರಗಳ ಮಧ್ಯೆ ತಾವು ಕೂಡಾ ಯಂತ್ರಗಳಾಗಿ ಮಾನವತ್ವವನ್ನು, ವಿಚಕ್ಷಣೆಯಜ್ಞಾನವು (Commonsense) ಇಲ್ಲದವರಿಗೆ ಪ್ರತಿಯೊಂದು ಸಣ್ಣವಿಷಯದಲ್ಲಿಯ ಸಂಶಯ ಹುಟ್ಟುತ್ತದೆ. ತನ್ನ ಕೆಲಸದ ಅನುಕೂಲ-ಪ್ರತಿಕೂಲಗಳಬಗ್ಗೆ, ತಾನು ಹಿಡದ ಮಾರ್ಗದಲ್ಲಿ ಉಂಟಾಗುವ ಲಾಭಗಳು ಮತ್ತು ಸಮಸ್ಯೆಗಳಬಗ್ಗೆ, ಸಮಸ್ಯೆಯನ್ನು ಉಂಟುಮಾಡುವವರಬಗ್ಗೆ, ಧನಸಂಪಾದನೆ, ಮನಃಷಾಂತಿ, ಪತ್ನಿ-ಪುತ್ರರ ಪ್ರಾಪ್ತಿ-ಅಪ್ರಾಪ್ತಗಳ ಬಗ್ಗೆ, ವಿವಾಹವಾಗುವ ಸಮಯ, ವಿಳಂಭಕ್ಕೆ ಕಾರಣ, ಸಮಸ್ಯೆಗೆ ಪರಿಷ್ಕಾರ, ಪ್ರಯತ್ನದಲ್ಲಿ ಇತರಜನರು ಕೊಡುವ ಸಹಕಾರ-ಅಸಹಕಾರ, ವಿದ್ಯೆ, ಉದ್ಯೋಗಗಳಲ್ಲಿ ಅನುಕೂಲತೆ, ಪ್ರತಿಕೂಲತೆ, ದೈವೀಕವಾಗಿ ಪರಿಷ್ಕಾರಕ್ಕೆ ಬೇಕಾದ ಉಪದೇಶಗಳು ಮೊದಲಾದ ಸಾವಿರಾರು ಪ್ರಶ್ನೆಗಳು, ಸಂದೇಹಗಳು ನಮ್ಮ ಜೀವಿತದಲ್ಲಿ ಪ್ರತಿಕ್ಷಣವೂ ಎದುರಾಗುತಿರುತ್ತವೆ. ಕೆಲವು ಸಮಸ್ಯೆಗಳನ್ನು ಸ್ವಂತಬುದ್ಧಿಯಿಂದ ಇನ್ನು ಕೆಲವು ಪ್ರಶ್ನೆಗಳನ್ನು ಜ್ಞಾನಿಗಳ ಸಲಹೆಯ ಮೇರೆಗೆ ಸಮಸ್ಯೆಗಳನ್ನು ಪರಿಷ್ಕರಿಸಿಕೊಳ್ಳುತ್ತಿರುತ್ತಾನೆ. ವೇದಾಂಗಜ್ಯೋತಿಷಾನಂತರ ಬೆಳಕಿಗೆ ಬಂದಂತ ಅತ್ಯಂತಪ್ರಾಮುಖ್ಯವಾದ ಜ್ಯೋತಿಷಶಾಸ್ತ್ರ ಮನುಷ್ಯನಿಗೆ ಯಾವುದೇ ಸಮಸ್ಯೆಯನ್ನಾದರೂ ಪರಿಷ್ಕರಿಸಿಕೊಳ್ಳುವ ಧೈರ್ಯವನ್ನು ಉಂಟುಮಾಡುತ್ತಿದೆ. ಮನುಷ್ಯನಲ್ಲಿರುವ ನಿರಾಶೆಯನ್ನು ದೂರಮಾಡುತ್ತಿದೆ. ಐಹಿಕಸುಖಶಾಂತಿಗಳಬಗ್ಗೆ, ಅನುಭವಿಸುವ ಕಾಲ ಅದರ ಪರಿಣಾಮಗಳಬಗ್ಗೆ ಬೇಕಾದ ಜ್ಞಾನವನ್ನು ಜ್ಯೋತಿಷಶಾಸ್ತ್ರ ಮುಂಚಿತವಾಗಿ ಕೊಡುತ್ತದೆ.
ಮನುಷ್ಯನ ಕಣ್ಣಿಗೆ ಇರುವ ವಿಶಿಷ್ಟತೆ ಯಾವಮಟ್ಟದ್ದೋ ಜ್ಯೋತಿಷಶಾಸ್ತ್ರವೂ ವೇದಾಂಗಗಳಲ್ಲಿ ಅಷ್ಟೇ ವಿಶಿಷ್ಟವಾದದ್ದು. ವೇದಗಳಮೂಲಕ ತಿಳಿಯಬೇಕಾದ ಜ್ಞಾನವನ್ನು ಸ್ಥಳಸ್ಪರ್ಶವಾಗಿ(Exclusive) ತಿಳಿದು ಅನುಭೂತಿಯನ್ನುಪಡೆಯುವುದಕ್ಕೆ ಜ್ಯೋತಿಷಶಾಸ್ತ್ರವು ಸಹಕರಿಸುತ್ತದೆ. ಅಧ್ಯಾತ್ಮಿಕ ದೃಕ್ಪದದಲ್ಲಿ ವ್ಯವಹರಿಸುವ ಜ್ಯೋತಿಷಶಾಸ್ತ್ರವು ಮನೋವೈಜ್ಞಾನಿಕ ಕೋನದಲ್ಲಿ (Angle) ಮನುಷ್ಯರ ಸಮಸ್ಯೆಯನ್ನು ಪರಿಷ್ಕರಿಸಿಕೊಳ್ಳುವುದಕ್ಕೆ ಬೇಕಾದ ಉಪಾಯವನ್ನು ತೋರಿಸುತ್ತಿದೆ. ಜ್ಯೋತಿಷಶಾಸ್ತ್ರದ ಮೂಲಕ ಬರುವ ಸಮಸ್ಯೆಗಳನ್ನು ಅರಿಯುವುದರಿಂದ ಸಮಸ್ಯೆಗಳ ತೀವ್ರತೆಯು (Intensity) ಕಡಿಮೆಯಾಗುವುದು.
ಧರ್ಮವೆಂದರೇ ಮನುಷ್ಯನನ್ನು ಮಾನಸಿಕವಾಗಿ, ಶಾರೀರಕವಾಗಿ ಶಾಶ್ವತವಾದ ಸಂತೋಷವನ್ನು ಪಡೆಯುವುದಕ್ಕೆ ರೂಪುಗೊಂಡ ಸೂತ್ರಗಳು. ಜ್ಞಾನಿಗಳು ತಮ್ಮ ದಿವ್ಯಶಕ್ತಿಯಿಂದ ಧರ್ಮಕ್ಕೆ ಗಟ್ಟಿಯಾದ ತಳಮನೆ (Foundation) ಹಾಕಿದ್ದಾರೆ. ಮಾನವಧರ್ಮ, ಕಾಲಧರ್ಮ, ಆಪದ್ಧರ್ಮ ಅನುಗುಣವಾಗಿ ಹೇಳಿರುವ ಸೂಚನೆಗಳನ್ನು ದೇಶಕಾಲಪರಿಸ್ಥಿತಿಗಳ ಅನುಗುಣಗಾಗಿ ನಾವು ನಡದುಕೊಂಡರೆ ಮನುಷ್ಯನಿಗೆ ಯಾವುದೇರೀತಿಯಾದ ಸಮಸ್ಯೆಗಳು ಬರುವದಿಲ್ಲ. ಇದಕ್ಕೆ ವಿಪರೀತವಾಗಿ ನಡದುಕೊಂಡರೇ ಸಮಸ್ಯೆಗಳು ಎದುರಾಗಿ ಅದರ ತೀವ್ರತೆಯೂ ಕೂಡಾ ಹೆಚ್ಚಾಗುವುದರಲ್ಲಿ ಯಾವ ಸಂಶಯವೂ ಇಲ್ಲ. ಮನುಷ್ಯನು ತಾನು ಮಾಡಿದ ಅಪರಾಧವನ್ನು ಜಾತಕದ ಮೂಲಕ ತಿಳಿದು ಸರಿಪಡಿಸುವ ಮಾರ್ಗ ಜ್ಯೋತಿಷಶಾಸ್ತ್ರದಮೂಲಕ ಪಡಿಯಬಹುದು.
ಜ್ಯೋತಿಷಶಾಸ್ತ್ರವು ಕಾಲದಮೇಲೆ ಆಧಾರಪಟ್ಟಿದೆ. ಕಾಲವು ಅನಾಧಿ ಅಂದರೇ ಆದಿಯಿಲ್ಲದ್ದು. ಕಾಲಕ್ಕೆ ಎಲ್ಲ ವಿಷಯಗಳೂ ಸಂಭಂದವಿದೆ. ಹಾಗಾಗಿ ಜ್ಯೋತಿಷಶಾಸ್ತ್ರವು ಸೃಷ್ಠಿಯಲ್ಲಿರುವ ಸಮಸ್ಥ ಶಾಸ್ತ್ರಗಳಿಗೂ, ವಿಷಯಗಳಿಗೂ ಸಂಭಂದವಿರುವುದನ್ನು ತಿಳಿಯಬಹುದು. ಜ್ಯೋತಿಷಶಾಸ್ತ್ರದಮೂಲಕ ಸಮಸ್ಥ ವಿಷಯಗಳನ್ನು ತಿಳಿಯುವ ಅವಕಾಶವಿದೆ. ಇದೇ ಜ್ಯೋತಿಷಶಾಸ್ತ್ರವು ಕೃತ,ತ್ರೇತಾ,ದ್ವಾಪರಯುಗಗಳಲ್ಲಿ “ದಿವ್ಯದೃಷ್ಠಿಯಾಗಿ” ವ್ಯವಹರಿಸುತಿತ್ತು. ಜ್ಞಾನಿಗಳು ಇದೇ ದಿವ್ಯದೃಷ್ಟಿಯಿಂದ ವೇದದಸಾರ, ಕರ್ಮಸಿದ್ಧಾಂತ, ಧರ್ಮಶಾಸ್ತ್ರಗಳ ಸಂದೇಶದ ಅನುಭೂತಿ ಪಡೆಯುತ್ತಿದ್ದರು. ಮನುಷ್ಯನ ಸ್ವಭಾವ, ಮನಸ್ಸು, ಕಾಲಸ್ವರೂಪ, ಸಾಧನಾಮಾರ್ಗ, ದೇಶಕಾಲಪರಿಸ್ಥಿತಿಗಳನುಗುಣವಾಗಿ ಮಾಡಬೇಕಾದ ಕರ್ತವ್ಯಕರ್ಮಗಳನ್ನು ತಿಳಿಯುವುದಕ್ಕೆ ಮತ್ತು ಪಾಪಕರ್ಮಗಳನ್ನು ತಿಳಿದು ಪ್ರಾಯಶ್ಚಿತ್ಯಾದಿಗಳನ್ನು ಮಾಡಿಕೊಳ್ಳುವುದಕ್ಕೆ ಜ್ಯೋತಿಷಶಾಸ್ತ್ರದ ಪ್ರಯೋಜನವನ್ನು ಹೊಂದುತ್ತಿದ್ದರು.

ಜ್ಯೋತಿಷಶಾಸ್ತ್ರಕ್ಕೆ ಸಮಸ್ತ ಶಾಸ್ತ್ರಗಳ ಸಂಭಂದ
ಭಗವಂತ ಭಗವದ್ಗೀತೆಯಲ್ಲಿ ಷದ್ವಿದಿಗಳನ್ನು ತಿಳಿಸಿದ್ದಾನೆ. ಮನುಷ್ಯನಾದವನು ಕಲಿಯಬೇಕಾದ ವಿಷಯಗುಳೇ ಆರು ಮಾತ್ರ. ಈ ಸೃಷ್ಟಿಯಲ್ಲಿರುವ ಸಮಸ್ತಶಾಸ್ತ್ರಗಳೂ ಈ ಆರು ವಿಷಯಗಳಕೆಳಗೆ ಬರುತ್ತದೆ. ವೈಧೀಕ ವಿಜ್ಞಾನಶಾಸ್ತ್ರಗಳುಮನುಷ್ಯನ ಮಾನಸಿಕ ಸ್ಥಿತಿಯನ್ನು ಪ್ರಭಾವಿತಗೊಳುಸುತ್ತದೆ. ಅಧ್ಯಾತ್ಮಶಾಸ್ತ್ರಗಳೆಲ್ಲವೂ ಮನಃಶಾಸ್ತ್ರಗಳಾಗಿದೆ. ಮನುಷ್ಯನ ದೇಹರಚನೆಯಿಂದ ಹಿಡದು ಮನಸ್ಸು, ಬುದ್ಧಿ, ಆತ್ಮ, ಇಂದ್ರಿಯಾಭಿಮಾನಿ ದೇವತೆಗಳ ಪ್ರಭಾವ, ಅದರಮೇಲೆ ಕೆಲಸಮಾಡುವ ದೈವಶಕ್ತಿ, ಭಗವಂತನ ಸರ್ವೋತ್ತಮತ್ವವನ್ನು, ಮನುಷ್ಯನ ಕರ್ಮ ಮೊದಲಾದ ವಿಷಯಗಳನ್ನು ಈ ಆರುಶಾಸ್ತ್ರಗಳು ವಿವರಿಸುತ್ತವೆಲ್ ಅಷ್ಟೇ ಅಲ್ಲದೇ ಹಿಂದೂ ವೈಧೀಕ ವಿಜ್ಞಾನ ಶಾಸ್ತ್ರಗಳು ಅತಿ ಪ್ರಾಚೀನವಾದದ್ದು. ಹಿಂದಿನ ಋಷಿಗಳು, ಮುನಿಗಳು ತಮ್ಮ ಅಧ್ಯಾತ್ಮಚಿಂತನೆಯಿಂದ ವೈಧೀಕವಿಜ್ಞಾನ ಶಾಸ್ತ್ರಕ್ಕೆ ಅಧ್ಭುತವಾದ ತಳಮನೆ ಹಾಕಿದ್ದಾರೆ. ಅವರ ಮೂಲಕ ಈ ಶಾಸ್ತ್ರಗಳು ಬೆಳಕಿಗೆ ಬಂದು ಸೃಷ್ಟಿ, ಕಾಲಧರ್ಮಗಳನ್ನು ತಿಳಿಯುವ ಅತ್ಯಧ್ಬುತವಾದ ಶಾಸ್ತ್ರಗಳಾಗಿ ಹೆಸರನ್ನು ಪಡೆದಿವೆ. ಆ ವಿಜ್ಞಾನಶಾಸ್ತ್ರಗಳೇ
1. ಅದಿಭೂತವಿಜ್ಞಾನ
2. ಅಧ್ಯಾತ್ಮ ವಿಜ್ಞಾನ
3. ಅದಿದೈವ ವಿಜ್ಞಾನ

4. ಅದಿಯಜ್ಞ ವಿಜ್ಞಾನ
5. ಬ್ರಹ್ಮ ವಿಜ್ಞಾನ
6. ಕರ್ಮ ವಿಜ್ಞಾನ

1. ಅಧಿಭೂತ ವಿಜ್ಞಾನ (ಮೆಟೀರಿಯಲ್ ಸೈನ್ಸ್)
ಅದಿಭೂತವಿಜ್ಞಾನವೆಂದರೇ ಪಾಂಚಭೂತಗಳಾದ ಪೃಥ್ವಿ ಜಲ, ಅಗ್ನಿ, ವಾಯು, ಆಕಾಶ ಮೊದಲಾದ ಪದಾರ್ಥಗಳ ಮಿಶ್ರಣದಿಂದ ರೂಪುಗೊಂಡ ಜಡ, ಚೇತನದ ಸಮುದಾಯ. ಅದಿಭೂತವಿಜ್ಞಾನದಿಂದಾ ಜಡ, ಚೇತನ ವಸ್ತುಗಳ ಭೌತಿಕ ಲಕ್ಷಣಗಳನ್ನು ತಿಳಿಯಬಹುದು.ಉದಾಹರಣೆಗೆ ಮಾನವಶರೀರದಲ್ಲಿ ಭಾಗವಾದ ಚರ್ಮ, ಮಾಂಸದಪದಾರ್ಥ, ರಕ್ತ, ಮೋಳೆಗಳು ಮೊದಲಾದ ಎಲ್ಲವೂ ಪೃಥ್ವಿ, ಜಲ ಅಗ್ನಿ ಪದಾರ್ಥಗಳಿಂದ ರೂಪುಗೊಂಡಿದೆ. ನಾವು ತೆಗದುಕೊಳ್ಳುವ ಶ್ವಾಸ ವಾಯುತತ್ವವಾಗಿದೆ. ಮನಸ್ಸು, ಶರೀರದಲ್ಲಿರುವ ಖಾಲಿಪ್ರದೇಶ ಆಕಾಶತತ್ವವಾಗಿದೆ. ಜೀವನು ಈ ಶರೀರದಲ್ಲಿ ನಿವಾಸವಿರುವತನಕ ಪಂಚಭೂತಗಳಾದ ಅಗ್ನಿ, ಜಲ, ಪೃಥ್ವಿ, ವಾಯು, ಆಕಾಶ ಒಗ್ಗಟ್ಟಾಗಿ ಇರುತ್ತವೆ. ನಮ್ಮ ಶರೀರವನ್ನು ನಿಶ್ಚಿತವಾಗಿ ಪರಿಶೀಲನೆಮಾಡಿದರೆ ಪಂಚತ್ವವನ್ನು ಉಳ್ಳ ಈ ಶರೀರ ಜೀವ ಇರುವತನಕ ಒಗ್ಗಟ್ಟಾಗಿ ಇರುತ್ತದೆ. ಜೀವನು ಈ ಶರೀರವನ್ನು ಬಿಟ್ಟುಹೋದಾಗ ಶ್ವಾಸಕ್ರಿಯೆ ನಿಂತುಹೋಗುತ್ತದೆ ಅಂದರೇ ಶ್ವಾಸ ಪಂಚಭೂತಗಳಲ್ಲಿ ಒಂದಾದ ಗಾಳಿಯಲ್ಲಿ ಕಲೆತುಹೋಗುತ್ತದೆ. ಆದಮೇಲೆ ಶರೀರದಲ್ಲಿರುವ ಬಿಸಿ (ಅಗ್ನಿತತ್ವ) ಹೊರಗಿನ ವಾತಾವರಣದಲ್ಲಿ ಸೇರಿ ಶರೀರವನ್ನು ತಣ್ಣಗೆ ಮಾಡುತ್ತದೆ. ಶರೀರದಲ್ಲಿರುವ ಖಾಲಿ ಪ್ರದೇಶವೆಲ್ಲಾ ಮುಚ್ಚಲ್ಪಟ್ಟು ಆಕಾಶತತ್ವ ಹೊರಗೆ ಹೋಗುತ್ತದೆ. ಕಾಲಕ್ರಮವಾಗಿ ಈ ಶರೀರ ಮಣ್ಣೀನಲ್ಲಿ ಸೇರುತ್ತದೆ. ಹೀಗೆ ಪಂಚಭೂತಗಳೆಲ್ಲ ಶರೀರವನ್ನು ಬಿಟ್ಟುಹೋಗುವದನ್ನು ಪಂಚತ್ವವನ್ನು ಹೊಂದುವದು ಅತವಾ ಮರಣ ಅಂತ ಕರೆಯುತ್ತೇವೆ. ಅದೇರೀತಿಯಲ್ಲಿ ಸೃಷ್ಟಿಯಲ್ಲಿ ಭೌತಿಕವಾಗಿ ಜನಿಸಿದ ಪ್ರತಿಯೊಂದು ಜಡ, ಜೀವ ಪಧಾರ್ಥಗಳು ಕಾಲಾನುಗುಣವಾಗಿ ನಾಶವಾಗಿ ಪಂಚಭೂತಗಳಲ್ಲಿ ಸೇರಿಕೊಳ್ಳುತ್ತದೆ. ಇದೇ ಸೃಷ್ಟಿಧರ್ಮ. ಈ ವಿಷಯಗಳಬಗ್ಗೆ ತಿಳಿಸುವ ಶಾಸ್ತ್ರವೇ ಭೌತ ವಿಜ್ಞಾನ ಶಾಸ್ತ್ರ. ಇದರ ಆಧಾರವಾಗಿ ವೈಧ್ಯಶಾಸ್ತ್ರ ಅಭಿವೃದ್ಧಿ ಆಗಿದೆ.

2. ಅಧ್ಯಾತ್ಮ ವಿಜ್ಞಾನ (ಮೆಟಾ-ಫಿಸಿಕಲ್ ಸೈನ್ಸ್)
ಅಧ್ಯಾತ್ಮವಿಜ್ಞಾನವೆಂದರೇ ಜೀವದ ಭೌತಿಕಶರೀರವನ್ನು ಪ್ರಭಾವಿತಗೊಳುಸುವ ಮನಸ್ಸು, ಬುದ್ಧಿ, ಚಿತ್ತ, ಆತ್ಮ ಮೊದಲಾದ ವಿಷಯಗಳಬಗ್ಗೆ ಅಧ್ಯಯನ ಮಾಡುವದು. ಸಮಾಜದಲ್ಲಿ ಒಬ್ಬ ವ್ಯಕ್ತಿಯನ್ನು ಗುರ್ತಿಸುವುದಕ್ಕೆ ಮುಖ್ಯವಾಗಿ ಶರೇರದಿಂದಲೇ ಅಲ್ವೇ! ಆದರೇ ಶರೀರ ರಕ್ತ-ಮಾಂಸಗಳಿಂದ ಏರ್ಪಟ್ಟ ಜಡ ಸಮುದಾಯ. ಸೂಕ್ಷ್ಮವಾಗಿ ಆಲೋಚನೆ ಮಾಡಿದರೇ ಮೃತಶರೀರವೂ ಕೂಡಾ ಒಂದು ಶರೀರವೇ ಆದರೇ ಅದರಲ್ಲಿ ಮನುಷ್ಯನನ್ನು ಯಾರೂ ಗುರ್ತಿಸುವುದಿಲ್ಲ. ಹಾಗಾಗಿ ಮನುಷ್ಯನಿಗೆ ಮನಸ್ಸು, ಬುದ್ಧಿ ಅತ್ಯಂತ ಮುಖ್ಯವಾದ ವ್ಯವಸ್ಥೆಗಳೆಂದು ಇಲ್ಲಿ ಗ್ರಹಿಸಬೇಕು. ಇಲ್ಲಿ ಮನಸ್ಸು ಅನ್ನುವದು ಕೂಡಾ ಒಂದು ಗಣಕಯಂತ್ರವಿದ್ಧಂತೆ (ಕಂಪ್ಯೂಟರ್). ಮನಸ್ಸಿಗೆ ತಾನಾಗಿ ಆಲೋಚನೆಮಾಡುವ ಶಕ್ತಿಯಿಲ್ಲ. ಶಾಲಿಯ ಮಕ್ಕಳನ್ನು ಉದಾಹರಣೆಯಾಗಿ ತೆಗದುಕೊಂಡರೆ ಅವರು ಕಲಿಯುವ ಪಾಠ ಹೀಗಿರುತ್ತದೆ. ಕಣ್ಣು ನೋಡುತ್ತದೆ…ಕಿವಿ ಕೇಳುತ್ತದೆ….. ಮೂಗು ವಾಸನೆಯನ್ನು ಗ್ರಹಣಮಾಡುತ್ತದೆ.. ಆದರೇ ವಯಸ್ಸು ಬೆಳಿಯುತ್ತಿರುವಾಗ, ಉನ್ನತವಾದ ವಿಧ್ಯೆಯನ್ನು ಅಭ್ಯಾಸಮಾಡಿದಾಗ ಮೇಲೆ ಕಲಿತ ವಿಷಯಗಳು ಬದಲಾಗುತ್ತದೆ. ಅದು ಹೇಗೆಂದರೇ ಸಣ್ಣ ಮಗು ಕಣ್ಣು ನೋಡುತ್ತದೆ ಅಂತ ಉತ್ತರ ಕೊಡುತ್ತದೆ. ದೊಡ್ಡವನಾದಾಗ ಕಣ್ಣು ನೋಡುವುದಲ್ಲ, ನಾನು ನೋಡುತ್ತಿದ್ದೇನೆ, ಕಣ್ಣಿನ ಸಹಾಯದಿಂದ ನೋಡುತ್ತಿದ್ದೇನೆ ಅಂತ ಉತ್ತರ ಬದಲಾಗುತ್ತದೆ. ಆದೇ ರೀತಿಯಲ್ಲಿ ನಾನು ನೆಡೆಯುತ್ತಿದ್ದೇನೆ, ತಿನ್ನುತಿದ್ದೇನೆ, ಶಬ್ಧಗ್ರಹಣ ಮಾಡಿತ್ತಿದ್ದೇನೆ, ನಾನು ಆಲೋಚನೆ ಮಾಡುತ್ತಿದ್ದೇನೆ… ಯೆಂಬುವ ಉತ್ತರ ಪರಿವರ್ತನೆಯಾಗುತ್ತದೆ. ಅಂದರೇ ಮನಸ್ಸೇ ತಾನಾಗಿ ಆಲೋಚನೆ ಮಾಡುವುದಲ್ಲ, ಮನಸ್ಸಿನಿಂದ ನಾನು ಆಲೋಚನೆ ಮಾಡುತ್ತಿದ್ದೇನೆ ಯೆಂಬುವ ವಿಷಯವನ್ನು ಅರಿಯುತ್ತೇವೆ. ಇಲ್ಲಿ ಮನಸ್ಸು ಬುದ್ಧಿ ಕೂಡಾ ಒಂದು ವಸ್ತುವಿನಂತೆ ವರ್ತಿಸುತ್ತದೆ. ಕಾಲಾನುಗುಣವಾಗಿ ಶರೀರದಲ್ಲಿ ಬದಲಾವಣೆ ಆದರೂ, ಮನಸ್ಸಿನ ಆಲೋಚನಾಶಕ್ತಿ ಅಭಿವೃದ್ದಿಯಾದರೂ, ಬುದ್ಧಿ ಕುಶಲತೆಯಲ್ಲಿ ಬಲಿಷ್ಟವಾದರೂ ನಾನು ಯೆಂಬುವ ಪದ ಬದಲಾಗುವುದಿಲ್ಲ. ಮನುಷ್ಯ ಎಷ್ಟು ಜನ್ಮಗಳು ತಾಳಿದರೂ, ಯಾವ ಶರೀರವನ್ನು ಪಡೆದರೂ ಈ ನಾನು ಯೆಂಬುವ ಪದ ಶಾಶ್ವತವಾಗಿ ವರ್ತನೆಮಾಡುತ್ತದೆ. ಇದೇ ಆತ್ಮದ ಸ್ವಭಾವ ಲಕ್ಷಣವೆಂದು ಗ್ರಹಿಸಬೇಕು. ಮನುಷ್ಯನ ಸ್ವಭಾವ, ಮನಸ್ಸಿನ ಪ್ರಭಾವ, ಬುದ್ಧಿ, ಚಿತ್ತ ಮೊದಲಾದ ವಿಷಯಗಳನ್ನು ಮತ್ತು ಅದರ ಸಂಯೋಗದಿಂದ ಆಗುವ ಪರಿವರ್ತನೆಗಳನ್ನು ಈ ಅಧ್ಯಾತ್ಮ ವಿಜ್ಞಾನದಲ್ಲಿ ಅಧ್ಯಯನಮಾಡಬಹುದು.

3. ಆಧಿದೈವ ವಿಜ್ಞಾನ
ಜೀವಿಯಭೌತಿಕಶರೀರ, ಮನಸ್ಸು, ಬುದ್ಧಿ ಮೊದಲಾದ ಪ್ರತಿವೊಂದುಇಂದ್ರಿಯಗಳು ಕೂಡಾದೈವಶಕ್ತಿಯಆಧೀನದಲ್ಲಿಕೆಲಸಮಾಡುತ್ತವೆಯೆನ್ನುವ ಸತ್ಯವನ್ನು ತಿಳಿಸುವ ವಿಜ್ಞಾನಶಾಸ್ತ್ರ ಆಧಿಧೈವ ವಿಜ್ಞಾನ. ಮನಸ್ಸು, ಬುದ್ಧಿ, ಕಣ್ಣು, ಕಿವಿ ಮೊದಲಾದ ಎಲ್ಲ ಇಂದ್ರಿಯಗಳುತಾನಾಗಿ ಜೀವಿಯ ಇಚ್ಚೆಗೆ ತಕ್ಕಂತೆ ಕೆಲಸಮಾಡವದಿಲ್ಲ. ಉದಾಹರಣೆಗೆನಮ್ಮಕಣ್ಣುಎಷ್ಟುಆರೋಗ್ಯವಂತವಾದರೂಕತ್ತಲಿನಲ್ಲಿಕಾಣುವದಿಲ್ಲ. ಬೆಳಕುಇಲ್ಲದಕಡೆಕಣ್ಣಿಗೆಕೆಲಸವಿಲ್ಲ. ಕಣ್ಣಿನಶಕ್ತಿವ್ಯಕ್ತವಾಗುವದುಬೆಳಕಿರುವಕಡೆಮಾತ್ರ. ಇಡೀಜಗತ್ತಿಗೆಬೆಳಕುಕೊಡುವದೇವಾತಾಶಕ್ತಿಯೆಂದರೇಸೂರ್ಯ. ಸೂರ್ಯಬ್ರಹ್ಮಾಂಡದಕಣ್ಣು. ಸೂರ್ಯಬೆಳಕುಕೊಟ್ಟುರೇಮಾತ್ರನಮ್ಮಕಣ್ಣುಈಜಗತ್ತನ್ನುನೋಡುತ್ತದೆ. ಬೆಳಕಿಗೆನಮ್ಮಕಣ್ಣೀಗೆಅಭಿಮಾನದೇವತೆಸೂರ್ಯ. ಅದೇರೀತಿಕಿವಿಗಳಿಗೆ ? ಚಂದ್ರ, ಮೂಗು-ಅಶ್ವಿದೇವತೆಗಳು, ನಾಲಿಗೆ ? ವರುಣ, ಕರಗಳು ? ಇಂದ್ರ, ಕಾಲು ? ಶನಿ (ಜ್ಯೋತಿಷಶಾಸ್ತ್ರಪ್ರಕಾರ) ಜೀರ್ಣವ್ಯವಸ್ಥೆ ? ಅಗ್ನಿಹೀಗೆಯೇಶರೀರದಲ್ಲಿಕೆಲಸಮಾಡುವಎಲ್ಲಇಂದ್ರಿಯಗಳನ್ನು ನಿಯಂತ್ರಣೆ ಮಾಡುವ ದೇವತಾಶಕ್ತಿಯ ಬಗ್ಗೆ ತಿಳಿಯುವ ಶಾಸ್ತ್ರವೇ ’ಆಧಿದೈವ ವಿಜ್ಞಾನ’.

4. ಆದಿಯಜ್ಞ ವಿಜ್ಞಾನ
ಆದಿ-ದೈವ ವಿಜ್ಞಾನದಲ್ಲಿ ಜೀವಿಯ ಪ್ರತಿ ಇಂದ್ರಿಯವನ್ನುನಿಯಂತ್ರಣೆಮಾಡತಕ್ಕದೇವತಾಶಕ್ತಿಯ ಬಗ್ಗೆ ತಿಳಿದಿದ್ದೇವೆ. ಇಲ್ಲಿ ಇಂದ್ರಿಯಾಭಿಮಾನಿ ದೇವತೆಗಳು ಯಾರ ಆಜ್ಞಾನುಸಾರವಾಗಿ ಜೀವಿಯ ಇಂದ್ರಿಯಗಳನ್ನು ನಿಯಂತ್ರಣೆ ಮಾಡುತ್ತಾರೆ? ಯೆನ್ನುವ ವಿಷಯವನ್ನು ಅಧ್ಯಯನಮಾಡುವ ವಿಜ್ಞಾನ ಶಾಸ್ತ್ರವೇಆದಿಯಜ್ಞವಿಜ್ಞಾನಶಾಸ್ತ್ರ. ಇಲ್ಲಿ ಒಂದು ಉದಾಹರಣೆಯನ್ನು ನೋಡೋಣ. ಕಣ್ಣಿನಲ್ಲಿ ಏನಾದರೂ ಧೂಳು ಬೀಳುವಾಗಕಣ್ಣನ್ನುಕಯ್ಯಿಂದಮುಚ್ಚುತ್ತೇವೆ. ಕಾಲಿನಲ್ಲಿ ಏನಾದರೂ ಮುಳ್ಳು ಚುಚ್ಚಿದಾಗ ಬೇಗ ಕಯ್ಯಿತೆಗಿಲಿಕ್ಕೆ ಹೋಗುತ್ತದೆ. ಕಣ್ಣಿನ ಅಭಿಮಾನೆ ದೇವತೆ ಸೂರ್ಯ ಕಯ್ಯಿಯ ದೇವತೆ ಇಂದ್ರ. ಇವರಿಬ್ಬರ ಮದ್ಯ ಎಷ್ಟು ಮೈತ್ರಿ ಇದೆ (ಅo-ಔಡಿಜiಟಿಚಿಣioಟಿ)! ಈ ಎರಡು ಇಂದ್ರಿಯಗಳಿಗೆಸಮನ್ವಯವನ್ನುಕಲ್ಪಿಸಿಕೆಲಸಮಾಡುವಂತೆ ಮಾಡುವ ಮೂಲಕಾರಕ ಯಾರು ಅಂತ ತಿಳಿಯುವ ಶಾಸ್ತ್ರವೇ ’ಆಧಿ-ಯಜ್ಞವಿಜ್ಞಾನ. ಸೃಷ್ಟಿ, ಸ್ಥಿತಿ, ಲಯಗಳಪ್ರೇರಕನಾದ ಭಗವಂತ ಎಲ್ಲಾ ಇಂದ್ರಿಯಾಭಿಮಾನದೇವತೆಗಳನ್ನುನಿಯಂತ್ರಣೆಮಾಡುತ್ತಾನೆ. “ಇಂದ್ರಿಯಾಭಿಮಾನಿದೇವತೆಗಳೆಲ್ಲ ಭಗವಂತನ ಆಜ್ಞಾನುಸಾರವಾಗಿಯೇಜೀವಿಯ ಇಂದ್ರಿಯಗಳನ್ನು ನಿಯಂತ್ರಣೆ ಮಾಡುತ್ತಾರೆ” ಯೆನ್ನುವ ಸತ್ಯವನ್ನು ತಿಳಿಯುವ ಶಾಸ್ತ್ರವೇ ಆಧಿ-ಯಜ್ಞ ವಿಜ್ಞಾನ.

5. ಬ್ರಹ್ಮ ವಿಜ್ಞಾನ
ಮನುಷ್ಯನ ಭೌತಿಕಶರೀರ, ಮನಸ್ಸು, ಬುದ್ಧಿ, ಅಧ್ಯಾತ್ಮ ಪ್ರಯಾಣವನ್ನುಇಂದ್ರಿಯಾಭಿಮಾನಿಯದೇವತೆಗಲ ಮೂಲಕ ನಿಯಂತ್ರಣೆ ಮಾಡುವ ಭಗವಂತನೇ ಇಡೀ ಜಗತ್ತಲ್ಲಿರುವ ಎಲ್ಲ ಜಡ-ಜೀವರಾಶಿಗಳನ್ನುಪ್ರಭಾವಿತಮಾಡುತ್ತಾನೆಯೆನ್ನುವ ಸತ್ಯವನ್ನು ತಿಳಿಯುವ ಶಾಸ್ತ್ರವೇ ಬ್ರಹ್ಮ ವಿಜ್ಞಾನ. ಈ ಶಾಸ್ತ್ರದಲ್ಲಿ ಸ್ಥಿತಿಕಾರಕನಾದ ಭಗವಂತನ ಸರೋತ್ತಮತ್ವವನ್ನು, ಪರಮಾರ್ಥ ತತ್ವವನ್ನು ಅಧ್ಯಯನ ಮಾಡಬಹುದು.

6. ಕರ್ಮವಿಜ್ಞಾನ
ಇಲ್ಲಿಯವರಿಗೂ ಮೇಲೆ ತಿಳಿಸಿದ ೫ವಿಜ್ಞಾನಶಾಸ್ತ್ರಗಳಆಧಾರವಾಗಿ ಜೀವಿಯ ಶರೀರವನ್ನುನಿಯಂತ್ರಣೆ ಮಾಡುವ ಇಂದ್ರಿಯಗಳು, ಇಂದ್ರಿಯಗಳನ್ನು ನಿಯಂತ್ರಣ ಮಾಡುವ ಇಂದ್ರಿಯಾಭಿಮಾನಿ ದೇವತೆಗಳು. ಆ ದೇವತಾಶಕ್ತಿಯನ್ನು ಕೂಡಾ ನಿಯಂತ್ರಣೆ ಮಾಡುವ ಭಗವಂತನನ್ನು ಅಧ್ಯಯನ ಮಾಡುವ ವಿಜ್ಞಾನಶಾಸ್ತ್ರಗಳ ಬಗ್ಗೆ ತಿಳಿದಿದ್ದೇವೆ. ಇವೆಲ್ಲವನ್ನುತಿಳಿದಮೇಲೆ ಮತ್ತೊಂದು ಹೊಸ ಪ್ರಶ್ನೆ ಉದಯಿಸುತ್ತದೆ. ಅದೇನಂದರೇ ಭಗವಂತ ಇಂದ್ರಿಯಾಭಿಮಾನಿಗಳ ಮೂಲಕ ಜೀವಿಯ ಶರೀರವನ್ನುಯೇಕೆನಿಯಂತ್ರಣೆ ಮಾಡುತ್ತಾನೆ? ಇದಕ್ಕೆ ಸಮಾಧಾನ ನಾವುವೇದೋಪನಿಷತುಗಳಲ್ಲಿ ಕಾಣಬಹುದು. ಜೀವಿಯ ಶುಭ-ಪಾಪ ಕರ್ಮಗಳಆಧಾರವಾಗಿನಿಯಂತ್ರಣೆ ಪ್ರಕ್ರಿಯೆ ಕೇಂದ್ರೀಕೃತವಾಗಿರುತ್ತೆ. ಕರ್ಮವಿಜ್ಞಾನದ ಬಗ್ಗೆ ಒಂದು ಸಣ್ಣ ಉದಾಹರಣೆ ನೋಡೋಣ.
ಒಂದು ಆನೆ ಬೆಂಗಳೂರಿನಿಂದ ಮೈಸೂರು ಕಡೆ ಪ್ರಯಾಣ ಮಾಡುತ್ತಿದೆ. ಆ ಆನೆಯಶರೀರದಮೇಲೆ ಹತ್ತು ಇರುವೆಗಳು (Ants) ಮೈಸೂರು ಕಡೆ ಆನೆಮೇಲೆ ಪ್ರಯಾಣ ಮಾಡುತ್ತಿವೆ. ಇಲ್ಲಿ ಪ್ರಶ್ನೆ ಏನಂದರೇಇರುವೆಗಳ ಓಡಾಟದಿಂದ ಮೈಸೂರು ಬಂತಾ? ಇಲ್ಲ ಆನೆಯ ಓಡಾಟದಿಂದ ಮೈಸೂರು ಬಂತಾ? ಆನೆಯ ನಡಿದಾಟದಿಂದ ಮೈಸೂರು ಬಂದಿದೆ ಅಂತ ಹೇಳಬಹುದು. ಇರುವಿಗಳು ಆನೆಯ ಶರೀರದ ಮೇಲೇ ಎಷ್ಟು ನಡಿದರೂ, ದಿಶೆ ಬದಲಾಯಿಸಿದರು ಆನೆ ಹೊರಡುವ ಗಮ್ಯಕ್ಕೆ ಸೇರಿಕೊಳ್ಳುತ್ತವೆ ಹಾಗೆಯೇ ಈ ಕಾಲಚಕ್ರವುಆನೆಯಂತೆತಿರುಗುತ್ತಿದೆ. ನಾವೆಲ್ಲರೂ ಕಾಲಚಕ್ರದಲ್ಲಿ ಸೇರಿಕೊಂಡು ಪ್ರಯಾಣ ಮಾಡುವ ಇರುವೆಗಳು. ಕಾಲಚಕ್ರವುನಿರ್ಧಾರಿಸಿದಗಮ್ಯವೇ ನಮ್ಮ ಗಮ್ಯ. ಈ ಪರಮಾರ್ಥ ತತ್ವವನ್ನು, ಜೀವಿಯ ಆನಾದಿಯಾಗಿರುವ ಕರ್ಮವನ್ನು ತಿಳಿಯುವ ಶಾಸ್ತ್ರವೇ ಕರ್ಮ ವಿಜ್ಞಾನ ಶಾಸ್ತ್ರ.
ವೇದಗಳಿಗೆಕಣ್ಣಾಗಿರುವಜ್ಯೋತಿಷಶಾಸ್ತ್ರದ ಅನುಸಾರವಾಗಿ ಮೇಲೆ ತಿಳಿಸಿದಂತಹ ಆರು ವಿಜ್ಞಾನಶಾಸ್ತ್ರಗಳನ್ನು ಅಧ್ಯಯನ ಮಾಡುವದು ಸುಲಭ. ಮನುಷ್ಯನ ಗಮ್ಯಸ್ಥಾನ, ಭಗವಂತನ ಸರ್ವೋತ್ತಮತ್ವವನ್ನುತಿಳಿಯುವದೇಮನುಷ್ಯನ ಸಾಧನೆ. ಜೀವನ ತತ್ವವನ್ನು ಪರಿಪೂರ್ಣವಾಗಿ ಅಧ್ಯಯನಮಾಡುವುದಕ್ಕೆಸಹಾಯಮಾಡುವ ಏಕೈಕ ಶಾಸ್ತ್ರ ಪ್ರತ್ಯಕ್ಷ-ಜ್ಯೋತಿಷಶಾಸ್ತ್ರ. ಜ್ಯೋತಿಷಶಾಸ್ತ್ರವನ್ನು ಅಧ್ಯಾತ್ಮಿಕ ದೃಕ್ಪದದಲ್ಲಿ (Spiritual Angle) ಅಧ್ಯಯನಮಾಡಿದರೇ ಭಗವಂತನ ಅಸ್ಥಿತ್ವವನ್ನು, ಪರಮಾರ್ಥತತ್ವವನ್ನು, ಲೋಕ-ಕಲ್ಯಾಣಕ್ಕಾಗಿತಾನುಮಾಡುವಮಹಾಕರ್ಮವನ್ನು, ಜೀವಿಯು ಭಗವಂತನ ಸೇರಬೇಕಾದ ಮಾರ್ಗ, ಸಾಧನೆಯನ್ನು ತಿಳಿಯಬಹುದು.

ಶ್ರೀಕೃಷ್ಣಾರ್ಪಣಮಸ್ತು

Advertisements
 
Leave a comment

Posted by on 25/01/2015 in Vedic Astrology

 

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

 
%d bloggers like this: