RSS

Free Vedic Astrology Workshop-2016

rayaru new2

START DATE     : 28 MAY 2016

 CLASSES            : Every SATURDAY at 05:30 PM

DURATION        : 30  Classes

VENUE               : Kalyani Raghavendra Swamy Mutt,

                                 Ashok Nagar,

                                 Basavangudi

                                 Bangalore.

For more details Contact 94820 94290 or send email to vaiswanara@gmail.com

 
Leave a comment

Posted by on 30/04/2016 in Vedic Astrology

 

Kalatra Sthana – Vivaha Vaibhava

 
Leave a comment

Posted by on 26/03/2016 in Vedic Astrology

 

VEDIC ASTROLOGY WORKSHOP@Girinagara, Bangalore

By the divine blessings of Sri HH Swamiji (Peethadipathigalu), Bhandarkeremutt, Girinagara a  VEDIC ASTROLOGY WORKSHOP will be conducted to share the Knowledge to the Devotees. Vedic Astrology workshop is a Knowledge Sharing Program to the interested Students. The Workshop will be started on 16-May-2015 at 04:00 PM evening.

Venue : Bandarkere Mutt, Sri Bhagavathashrama, Girinagar 2nd Phase Bangalore 560 085   For more details contact at +91 94820 94290 vaiswanara@gmail.com

 
Leave a comment

Posted by on 09/05/2015 in Vedic Astrology

 

22-FEB-2015 WORKSHOP DISCUSSION

Guru-sishya

ಮನುಷ್ಯನು ಮಾಡಿದ ಶುಭಾಶುಭಕರ್ಮಗಳಿಗೆ ಕಾರಣ ಗ್ರಹಗಳೇ ಅಥವಾ ದೈವವೇ?

          ನಮ್ಮಜನರು ಬಳಿಸುವ ಮಾತು ಒಂದಿದೆ. ಶಿವನ ಆಜ್ಞೆ ಇಲ್ಲದೇ ಇರುವೇ ಕೂಡಾ ಕಚ್ಚುವುದಿಲ್ಲ. ಅಂದರೇ ಎಲ್ಲವೂ ಭಗವಂತನ ಸಂಕಲ್ಪ. ಎಲ್ಲವಿಷಯಗಳಿಗೂ ಭಗವಂತನೇ ಕಾರಣ. ಹೀಗೆ ಚರ್ಚಿಸುತ್ತಹೋದರೇ ಬಹಳಾ ಪ್ರಶ್ನೆಗಳು ಬರುತ್ತವೆ. ನಾವು ಮಾಡುವ ಒಳ್ಳೆಯ ಕೆಲಸಗಳು ಮತ್ತು ಕೆಟ್ಟ ಕೆಲಸಗಳಿಗೂ ಯಾರು ಕಾರಣ? ಯಾರ ಪ್ರೇರಣೆಯಿಂದ, ಯಾರ ಪ್ರೋತ್ಸಾಹದಿಂದ, ಯಾರ ಆಧೀನದಲ್ಲಿ ನಡೆಯುತ್ತಿದ್ದವೇ? ಮೊದಲಾದ ಎಲ್ಲ ಪ್ರಶ್ನೆಗಳಿಗೂ ಉತ್ತರಬೇಕಾಗುತ್ತದೆ. ಇದರಬಗ್ಗೆ ಚರ್ಚಿಸೋಣ.

          ಪ್ರಕೃತಿಯಲ್ಲಿ ನಡೆಯುವ ಸಮಸ್ತ ವ್ಯಾಪಾರಗಳಿಗೆ ಭಗವಂತನ ಶಕ್ತಿ, ಪ್ರೇರಣೆಯಿಂದ ನಡೆಯುತ್ತಿದ್ದಾವೆಯೆಂದು ವೇದೋಪನಿಷತುಗಳು ಘೋಷಿಸುತ್ತಿವೆ. ಹಾಗಾಗಿ ಭಗವಂತನೇ ಸರ್ವತಂತ್ರಸ್ವತಂತ್ರನೆಂಬುವ ವಿಷಯದಲ್ಲಿ ಸಂದೇಹವಿಲ್ಲ. ಭಗವಂತನೇ ಸರ್ವಜ್ಞನು, ಸರ್ವವ್ಯಾಪ್ತಿಯು, ಸರ್ವಸಮರ್ಥನು. ಸಂದರ್ಭದಲ್ಲಿ ನಮಗೆ ಒಂದು ಪ್ರಶ್ನಯು ಉದಯಿಸುತ್ತದೆ. ಅದೇನೆಂದರೇ ನಮ್ಮನ್ನು ಮತ್ತು ಸಮಸ್ತ ಪ್ರಕೃತ್ತಿಯನ್ನು ಸೃಷ್ಟಿಮಾಡಿದ ಭಗವಂತ ನಮ್ಮ ಕೈಯಲ್ಲಿ ಒಳ್ಳೆಯಕೆಲಸವನ್ನೇ ಮಾಡಿಸಬಹುದಲ್ವಾ? ನಮ್ಮ ಹತ್ತರ  ಪಾಪದಕೆಲಸವನ್ನು ಯಾಕೆ ಮಾಡಿಸುತ್ತಿದ್ದಾನೆ? ಪಾಪದ ಕೆಲಸಮಾಡಿದಕ್ಕೆ ಶಿಕ್ಷೆ ಯಾಕೆ ಕೊಡುತ್ತಿದ್ದಾನೆ? ಇಂತಹ ನೂರಾರು ಪ್ರಶ್ನೆಗಳು ಉದಯಿಸುತ್ತವೆ. ಇದು ಸಣ್ಣಮಕ್ಕಳಿಂದ ಹಣ್ಣು ಮುದುಕರತನಕ ಕಾಡುವ ಪ್ರಶ್ನೆ. ಇಂತಹಾ ಪ್ರಶ್ನೆಗಳಿಗೆ ಉತ್ತರವನ್ನು ತಿಳಿಯಬೇಕು. ಉತ್ತರಸಿಕ್ಕಿದರೇ ನಮ್ಮ ಸಮಸ್ಯೆಗಳೆಲ್ಲವೂ ಅದೃಶ್ಯವಾಗುತ್ತದೆ. ಇದರಬಗ್ಗೆ ಈಗ ತಿಳಿಯೋಣ. ನನಗೆ ನನ್ನ ಗುರುಗಳು ಹೇಳಿದ ಉದಾಹರಣೆಯನ್ನು ನಾನು ಹೇಳುತ್ತೇನೆ.

          ಒಂದು ಶಾಲೆಯಲ್ಲಿ ಅಧ್ಯಾಪಕ ಪಾಠಮಾಡುತ್ತಿದ್ದ. ಅಧ್ಯಾಪಕ ಎಲ್ಲ ಮಕ್ಕಳಿಗೂ ಒಂದೇರೀತ ಪಾಠ್ಯಾಂಶಗಳನ್ನು ಭೋಧನೆಮಾಡುತ್ತಿದ್ದ. ಕೆಲವು ವಿದ್ಯಾರ್ಥಿಗಳು ವಿಷಯವನ್ನು ಬೇಗ ಗ್ರಹಣೆಮಾಡಿದರು, ಮತ್ತಿಷ್ಟು ಜನ ವಿದ್ಯಾರ್ಥಿಗಳು ಅರ್ಥಮಾಡಿಕೊಳ್ಳದೇ ತಲೆಬಿಸಿ ಮಾಡಿಕೊಂಡರು. ವಿಷಯವನ್ನು ಬೇಗಗ್ರಹಣಮಾಡಿದ ವಿದ್ಯಾರ್ಥಿಗಳು ಪ್ರಗತಿಯನ್ನು ಪಡೆದರು. ವಿಷಯದ ಅರ್ಥಗ್ರಹಿಸಲಾರದ ವಿದ್ಯಾರ್ಥಿಗಳು ಪ್ರಗತಿಪಡೆಯುವುದಲ್ಲಿ ವಿಫಲರಾದರು. ಶಾಲೆಯ ವಿಷಯದಲಿ ನೋಡಿದರೇ ವಿಷಯವನ್ನು ಗ್ರಹಣಮಾಡಲಾರದ ವಿದ್ಯಾರ್ಥಿ ತನ್ನ ಸ್ವಂತದೋಷದಿಂದ ಪ್ರಗತಿ ಪಡೆಯುವುದರಲ್ಲಿ ವಿಫಲವಾಗಿದ್ದಾನೆ. ಇದು ಅಧ್ಯಾಪಕನ ದೋಷವಲ್ಲ. ಅಧ್ಯಾಪಕ ಎಲ್ಲರಿಗೂ ಒಂದೇರೀತಿ ಪಾಠವನ್ನು ಮಾಡಿದರೂ ವಿಷಯವನ್ನು ಅರ್ಥಮಾಡಿಕೊಳ್ಳುವ ವಿದ್ಯಾರ್ಥಿಗಳು ಮಾತ್ರವೇ ಪ್ರಗತಿಯನ್ನು ಸಾದಿಸುತ್ತಾರೆ. ಇಲ್ಲಿ ಇನ್ನೊಂದು ಪ್ರಶ್ನೆಯು ಉದಯಿಸುತ್ತದೆ. ಶಾಲೆಯಲ್ಲಿ ವಿದ್ಯಾರ್ಥಿಗಳು ವಿಷಯಗ್ರಹಣೆಮಾಡುವುದಕ್ಕೆ ಮತ್ತು ಮಾಡದಿಲ್ಲದಿರುವುದಕ್ಕೆ ಕೂಡಾ ದೈವವೇ ಕಾರಣವಲ್ಲವೇ? ಪ್ರಶೆಗೆ ಕೂಡಾ ಉತ್ತರವನ್ನು ಪಡೆಯಬೇಕು. ಪ್ರಶ್ನೆಗೆ ಭಗವಂತ ಶ್ರೀಕೃಷ್ಣ ಭಗವದ್ವೀತೆಯಲ್ಲಿ ಉತ್ತರಿಸುವುದನ್ನು ನೋಡೋಣ.     ಭಗವಂತ ಶ್ರೀಕೃಷ್ಣ ಈರೀತಿಯಾಗಿ ಉತ್ತರಿಸಿದ್ದಾನೆ.

ನಕತ್ರುತ್ವಂ ನಕರ್ಮಾಣಿ ಲೋಕಸ್ಯ ಸೃಜತಿಪ್ರಭುಃ |

ನ ಕರ್ಮಫಲ ಸಂಯೋಗಂ ಸ್ವಭಾವಸ್ತು ಪ್ರವರ್ತತೇ ||

 ನಾನು ಯಾವುದೇವಿದವಾದ ಕರ್ಮಗಳನ್ನು ನನ್ನ ಇಚ್ಚೆಯಂತೆ ಮಾಡಿಸುವುದಿಲ್ಲ, ಎಲ್ಲ ಕ್ರಿಯೆಗಳು ಅವರವರ ಸ್ವಭಾವವನ್ನು ಅನುಸರಿಸಿ ನಡೆಯುತ್ತವೆ.

          ಮೇಲಿನ ಶ್ಲೋಕದ ತಾತ್ಪರ್ಯವನ್ನು ನೋಡಿದರೇ ಎಲ್ಲ ಕರ್ಮಗಳು ಮನುಷ್ಯನ ಸ್ವಭಾದಮೂಲಕವಾಗಿಯೇ ನಡೆಯುತ್ತವೆ. ಮನುಷ್ಯನಿಗೆ ಸ್ವಭಾವ ಭಗವಂತಕೊಟ್ಟಿದ್ದಲ್ಲ. ಅತ್ಮದ ಸ್ವಭಾವ ಅನಾದಿ. ಒಳ್ಲೆಯ ಸ್ವಭಾವವಿರುವ ಮನುಷ್ಯ ಒಳ್ಲೆಯಯ ಕಾರ್ಯಗಳನ್ನು, ಕೆಟ್ಟಸ್ವಭಾವವಿರುವ ಮನುಷ್ಯಪಾಪಕಾರ್ಯಗಳನ್ನು ಮಾಡುತ್ತಾನೆ. ಸ್ವಭಾವದಬಗ್ಗೆ ಒಂದು ಉದಾಹರಣೆಯನ್ನು ನೋಡೋಣ. ಒಬ್ಬತೋಟಗಾರ ಒಂದು ಸುಂದರವಾದ ತೋಟದಲ್ಲಿ ಕೆಲಸಮಾಡುತ್ತಿದ್ದ. ತೋಟದಲ್ಲಿ ಎಲ್ಲತರವಾದ ವೃಕ್ಷಗಳು ಬೆಳಯುತ್ತಿದ್ದವು. ಪ್ರತಿದಿನ ತೋಟಗಾರ ಗಿಡಗಳಿಗೆ ನೀರುಹಾಕುವುದು, ಗೊಬ್ಬರಹಾಕುವುದು, ರಕ್ಷಣೆಮಾಡುವುದು ಮೊದಲಾದ ಕೆಲಸಗಳನ್ನು ಮಾಡುತ್ತಿದ್ದ. ಇಲ್ಲಿ ನೋಡಿದರೇ ತೋಟಗಾರ ಎಲ್ಲವೃಕ್ಷಗಳಿಗೂ ಒಂದೇತರವಾದ ನೀರನ್ನು, ಗೊಬ್ಬರವನ್ನು ಹಾಕುತ್ತಾನೆ. ಆದರೇ ಗಿಡಗಳ ಸ್ವಭಾವಾನುಸಾರವಾಗಿ ಮಾವಿನಹಣ್ಣು ಸಿಹಿಯಾಗಿ, ಮೆಣಿಸಿನಕಾಯಿ ಖಾರವಾಗಿ, ಹುಣಸೇಕಾಯಿ ಹುಳಿಯಾಗಿ ಬೆಳೆಯುತ್ತವೆ. ತೋಟಗಾರ ಮಾವಿನ ಗಿಡಕ್ಕೆ ಸಕ್ಕರೆನೀರು, ಮೆಣಿಸಿನಕಾಯಿಗಿಡಕ್ಕೆ ಖಾರದನೀರು, ಹುಣಸೇಕಾಯಿ ಗಿಡಕ್ಕೆ ಹುಳಿಯಾದ ನೀರು ಹಾಕಿಲ್ಲ. ಒಂದೇತರವಾದ ನೀರನ್ನು ಹಾಕಿ ರಕ್ಷಣೆಮಾಡುತ್ತಾನೆ. ಇಲ್ಲಿತೋಟಗಾರನ ಆವಶ್ಯಕತೆ ನೋಡಿದರೇ ಗಿಡದ ಬೀಜವನ್ನು ಭೂಮಿಯಲ್ಲಿ ಬಿತ್ತಿ, ನೀರುಹಾಕಿ, ಗೊಬ್ಬರಹಾಕಿ ರಕ್ಷಣಮಾಡುವದು ಅವನ ಕರ್ತವ್ಯ. ಒಂದುಪಕ್ಷ ಬೀಜವನ್ನು ಬಿತ್ತದಿದ್ದರೇ ಬೀಜವು ಬೀಜದಂತೆ ಇದ್ದು, ಬೀಜದ ಸ್ವಭಾವ ಅಭಿವ್ಯಕ್ತವಾಗದೇ ನಾಶವಾಗುತಿತ್ತು. ಅದೇರೀತಿಯಾಗಿ ಭಗವಂತ ನಮ್ಮನ್ನು ತಾಯಿಗರ್ಭದಲ್ಲಿ ಬಿತ್ತಿ, ಬೆಳಯುವಂತೆಮಾಡಿ, ರಕ್ಷಣೆಮಾಡುತ್ತಿದ್ದಾನೆ. ನಾವು ಮಾಡುವ ಕರ್ಮಗಳಿಗೆ ನಮ್ಮ ಸ್ವಭಾವವೇ ಕಾರಣ. ಭಗವಂತ ಕಾರಣವಲ್ಲ. ನಾವು ಮಾಡಿದ ಕರ್ಮಗಳಿಗೆ ತಕ್ಕ ಫಲವನ್ನು ಕೊಡುವುದು ಭಗವಂತನ ಸ್ವಭಾವ. ಜೀವಮಾಡುವ ಕರ್ಮಗಳು ಮತ್ತೊಬ್ಬರಿಗೆ ಹಾನಿಯಾಗದಂತೆ ಭಗವಂತ ಪ್ರಧಾನಪಾತ್ರವನ್ನು ಪೋಷಿಸುತ್ತಾನೆ. ಮನುಷ್ಯನ ವಿಕೃತಚೇಷ್ಟೆಗಳಿಂದ ಧರ್ಮಲೋಪವಾದಾಗ ಭಗವಂತ ಅವತಾರತಾಳುತ್ತಾನೆ. ದುಷ್ಟರನ್ನು ಸಂಹಾರ ಮಾಡಿ ಶಿಷ್ಟರನ್ನು ರಕ್ಷಣೆಮಾಡುತ್ತಾನೆ ಯೆಂತು ನಮಗೆಲ್ಲವೂ ಗೊತ್ತಿದೆ.

 

ಜಾತಕ ಪರಿಶೀಲನೆ ಮತ್ತು ಅದರ ಫಲನಿರ್ಣಯ ವಿಷಯದಲ್ಲಿ ಸತ್ಯಾಸತ್ಯಗಳ ಪ್ರಮಾಣದ ಆವಶ್ಯಕತೆ, ಕೆಲವು ಸಂಧರ್ಭಗಳಲ್ಲಿ ಜಾತಕದಲ್ಲಿ ಇರುವ ವಿಷಯಗಳನ್ನು ತಿಳಿಸಬೇಕಾಗುತ್ತದೆ. ನಿಜಹೇಳುವುದರಿಂದ ಪೃಚ್ಚಕನ ಮನಸ್ಸಿಗೆ ತೊಂದರೆಯೂ ಆಗುತ್ತದೆ. ಸಂಧರ್ಭದಲ್ಲಿ ಜ್ಯೋತಿಷ್ಯನ ಕರ್ತವ್ಯವೇನು?

ಪ್ರಶ್ನೆಯನ್ನು ಚಿಂತನೆಮಾಡುವುದಕ್ಕೆ ಮುಂಚಿತವಾಗಿ ಸತ್ಯಾಸತ್ಯದ ನಿರ್ವಚನೆಯನ್ನು ನೋಡೋಣ. ಸತ್ಯವೆಂದರೇನುನಿಜಹೇಳುವುದೇ ಸತ್ಯವೇ? ಸತ್ಯದ ನಿರ್ವಚನೆಯನ್ನು ಅರ್ಥಮಾಡಿಕೊಳ್ಳಬೇಕಾದರೇ ಶ್ರೀಕೃಷ್ಣನು ಭಗವದ್ಗೀತೆಯಮೂಲಕ ತಿಳಿಸಿದ ಅರ್ಥವನ್ನು ನೋಡಬೇಕು. ಸತ್ಯವೆಂದರೇ ನಿಜಹೇಳುವುದು ಮಾತ್ರ ಅಲ್ಲ. ಶ್ರೀಕೃಷ್ನನ ಪ್ರಕಾರ ಸತ್ಯವೆಂದರೇ ಯಾವುದು ಮಾತಾಡುವುದರಿಂದ ಜನರ ಮನಸ್ಸಿಗೆ ಆನಂದ ಮತ್ತು ಹಿತವಾಗುತ್ತದೋ ವಿಷಯವನ್ನು ಸತ್ಯವೆಂದು ತಿಳಿಯಬೇಕು. ಹೇಳುವ ವಿಷಯವು ಸುಳ್ಳಾದರು ಅದು ಜನರ ಹಿತವನ್ನು, ಆನಂದವನ್ನು ಬಯಸಿದರೆ ವಿಷಯ ಸತ್ಯಕ್ಕೆ ಸಮಾನವಾಗುತ್ತದೆ. ಹೇಳುವ ವಿಷಯ ನಿಜವಾದರು ಅದು ಸಮಾಜಕ್ಕೆ ದುಃಖ, ಮನಸ್ಸಿಗೆ ಗಾಯವನ್ನು ಮಾಡಿದರೇ ವಿಷಯವು ಅಸತ್ಯವೆಂದು ಪರಿಗಣಿಸಬೇಕು.

          ಜ್ಯೋತಿಷಶಾಸ್ತ್ರದಫಲವಿಷಯದಲ್ಲಿಯೂ ಇದೇ ಪದ್ಧತಿಯನ್ನು ಅನುಸರಿಸಬೇಕು. ವ್ಯಕ್ತಿಯ ಜಾತಕ ಕಠೋರವಾದಫಲವನ್ನು ತಿಳಿಸಿದರೂ ಜನರಿಗೆ ಫಲಹೇಳುವಾಗ ಮಾತ್ರ ಶಾಂತಚಿತ್ತದಿಂದ, ಅವನ ಹೃದಯಕ್ಕೆ ಗಾಯವಾಗದಂತೆ ಹಿತವಾಕ್ಯಗಳನ್ನು ನುಡಿಯಬೇಕು. ಶ್ರೀಕೃಷ್ಣನು  ಕೊಟ್ಟ ಸತ್ಯಾಸತ್ಯ ನಿರ್ವಚನವನ್ನು ಮರೆತು ಜಾತಕದಲ್ಲಿ ಇದ್ಧಿದ್ದು ಇದ್ದಂತೆ ಪೃಚ್ಚಕನಿಗೆ ತಿಳಿಸಿದರೇ ಅವನ ಸಮಸ್ಯೆ ಮತ್ತಿಷ್ಟು ದೊಡ್ಡದಾಗುತ್ತದೆ. ಇದು ಅಸತ್ಯವೆನ್ನಿಸಿಕೊಳ್ಳುತ್ತದೆ. ಸತ್ಯಮೇವಜಯತೇ ಯೆನ್ನುವ ಮಾತು ಜ್ಯೋತಿಷಶಾಸ್ತ್ರಕ್ಕೊಂದೇ ಅಲ್ಲದೇ ಎಲ್ಲ ಸಂಧರ್ಭಗಳಲ್ಲಿಯೂ ಅನ್ವಯವಾಗುತ್ತದೆ.

          ಮಹಾಭಾರತದಲ್ಲಿ ಸತ್ಯದನಿರ್ವಚನೆಯ ನಿರೂಪಣೆಗಾಗಿ ಶ್ರೀಕೃಷ್ಣನು ಒಂದು ಕಥೆಯನ್ನು ತಿಳಿಸುತ್ತೇನೆಒಂದುವೂರಿನಲ್ಲಿ ಒಬ್ಬ ಮುದುಕ ತನ್ನ ಜೀವಮಾನದಲ್ಲಿ ಸಂಪಾದನೆ ಮಾಡಿದ ಹಣವನ್ನು ಚೀಲದಲ್ಲಿ ಹಾಕಿಕೊಂಡು ಕಾಡುಮಾರ್ಗದಲ್ಲಿ ಹೋಗುತ್ತಿದ್ದ. ಧನವನ್ನು ಕೊಂಡೊಯ್ಯುತ್ತಿರುವ ಆಮುದುಕನನ್ನು ಒಬ್ಬ ಕಳ್ಳನ ಗಮನಕ್ಕೆ ಬಂತು. ಹಣವನ್ನು ಅಪಹರಣಮಾಡಲು ಕಳ್ಳ ಮುದುಕನನ್ನು ಬೆನ್ನತ್ತಿದ. ಕಳ್ಳನು ಬೆನ್ನತ್ತುವುದನ್ನು ಗಮನಿಸಿದ ಮುದುಕ ರಕ್ಷಣೆಮಾಡಿಕೊಳ್ಲಲು ಹತ್ತರ ಇರುವ ಒಂದು ಆಶ್ರಮದಲ್ಲಿ ನುಗ್ಗಿದ. ಆಶ್ರಮದಲ್ಲಿ ಒಬ್ಬ ಸಾದು ಶಾಸ್ತ್ರಾಧ್ಯನಮಾಡುತ್ತಿದ್ದ. ಕಳ್ಳ ಸಾದುವನ್ನ ನೋಡಿ ಮುದುಕ ಇಲ್ಲಿ ಬಂದನೆಂಬುವ ವಿಚಾರವನ್ನು ಕೇಳಿದ. ಸಂಧರ್ಬದಲ್ಲಿ ಮುದುಕಬಂದನೆಂಬ ನಿಜವನ್ನು ಹೇಳಿದರೇ ಮುದುಕನ ಪ್ರಾಣಕ್ಕೆ ಆಪತ್ತುಬರುತ್ತದೆ. ಅಲ್ಲಿ ಮುದುಕನ ರಕ್ಷಣೆ ಪ್ರಥಮ ಕರ್ತವ್ಯ. ಸುಳ್ಳು ಹೇಳಿದರೇ ಮುದುಕನ ಪ್ರಾಣಕ್ಕೆ ಆಪತ್ತಾಗುವುದಿಲ್ಲ. ಸಾದು ನಾನು ಯಾವ ಮನುಷ್ಯನನ್ನು ನೋಡಿಲ್ಲವೆಂದು ಉತ್ತರನೀಡುತ್ತಾನೆ. ಕಳ್ಳಅಲ್ಲಿಂದ ತೊಲಗುತ್ತಾನೆ. ಸಾದು ಸುಳ್ಳು ಹೇಳಿದರೂ ಅದು ಮುದುಕನ ರಕ್ಷನೆಗಾಗಿ ಹೇಳಿದ್ದರಿಂದ ಸತ್ಯವೆನಿಸಿಕೊಂಡಿತು.

ಹಾಗಾಗಿ ಸತ್ಯದ ನಿರ್ವಚನವನ್ನು ಸರಿಯಾಗಿ ಅರ್ಥಮಾಡಿಕೊಂಡು ಆಚರಣೆಗೆ ತಂದರೇ ಸತ್ಯವನ್ನು ಹೇಳುವುದು ದೊಡ್ಡಕಷ್ಟವಾದ ವಿಷಯವೇನೂ ಅಲ್ಲ. ಇಲ್ಲಿ ಗ್ರಹಿಸಬೇಕಾದ ವಿಷಯವೇನೆಂದರೇ ಸತ್ಯಕ್ಕೆ ನಿರ್ವಚನ ಭಗವದ್ಗೀತೆಯಿಂದ ಸ್ವೀಕರಿಸಲಾಗಿದೆಹಾಗೇನೇ ಧರ್ಮ, ನ್ಯಾಯ , ಅಹಿಂಸೆ ಮೊದಲಾದ ನಿರ್ವಚನವ ತಿಳಿದರೇ ಆಚರಣೆಮಾಡುವುದು ಕಷ್ಟವೇನೂ ಅಲ್ಲ. ಜೀವನದಲ್ಲಿ ಧರ್ಮವನ್ನು ತಿಳಿಯುವುದು ಕಷ್ಟ ಆದರೆ ಆಚರಣೆ ಬಹು ಸುಲಭ. ಜೀವನದಲ್ಲಿ ಧರ್ಮವನ್ನು ಆಚರಣೆಮಾಡಬೇಕೆಂದು ಸಂಕಲ್ಪಿಸಿದರೇ ಮೊದಲು ಧರ್ಮವನ್ನು ತಿಳಿಯಬೇಕು. ಸಂಪೂರ್ಣಫಲನಿರ್ದಾರಣೆಗಾಗಿ ಜ್ಯೋತಿಷ್ಯನಿಗೆ ಎಲ್ಲಶಾಸ್ತ್ರದ ವಿಷಯಗಳನ್ನು ಮನನಮಾದಬೇಕು.

 
Leave a comment

Posted by on 02/03/2015 in Vedic Astrology

 

01-Feb-2015 Workshop Discussion

–              ಗ್ರಹಗಳು ಕೆಲವು ಜನಕ್ಕೆ ಶುಭವಾಗಿ ಮತ್ತಿಷ್ಟುಜನಕ್ಕೆ ಅಶುಭವಾಗಿ (ಪಾಪ) ಫಲವನ್ನು ಏಕೆ ಕೊಡುತ್ತದೆ?

–              ಕೆಲವು ಜನರ ಜಾತಕಗಳಷ್ಟೇ ಚೆನ್ನಾಗಿರುವುದಕ್ಕೆ ಕಾರಣವೇನು?

–              ಜಾತಕದಲ್ಲಿ ದೋಷಗಳು ಹೇಗೆ ಹುಟ್ಟುತ್ತೆ? ಮನುಷ್ಯರಲ್ಲಿ ದೋಷದ ತಾರತಮ್ಯವೇನು?

 ಮೇಲೆ ಹೇಳಿದಂತ ಸಮಸ್ಯೆಗಳಿಗೆ ಮೂಲಕಾರಣ ಮನುಷ್ಯನ ಪ್ರಾಚೀನ ಕರ್ಮ. ಪ್ರತಿಯೊಬ್ಬ ಮನುಷ್ಯನು ತಾನು ತಾಳಿದ ಅನೇಕ ಜನ್ಮಗಳಲ್ಲಿ ಮಾಡಿದ ಶುಭ-ಪಾಪ ಕರ್ಮಗಳ ಪ್ರಮಾಣ ಆಧಾರವಾಗಿ ಸುಖ-ದುಃಖಗಳು ಉಂಟಾಗುತ್ತವೆ. ಈಗಿನ ಯುಗಧರ್ಮಪ್ರಕಾರ (ಕಲಿಯುಗ) ಹಿಂದಿನ ಜನ್ಮಗಳಲ್ಲಿ ಮಾಡಿದ ಮತ್ತು ಈಗ ಮಾಡುತ್ತಿರುವ ಶುಭ-ಪಾಪ ಕರ್ಮಗಳಿಗೆ ಫಲವನ್ನು ಬರುವಜನ್ಮದಲ್ಲಿ ಅನುಭವಿಸಬೇಕಾಗುತ್ತದೆ. ಮನುಷ್ಯಮಾಡಿದ ಒಳ್ಳೆಯಕೆಲಸ ಪುಣ್ಯವಾಗಿಯು, ಕೆಟ್ಟಕೆಲಸ ಪಾಪ(ದೋಷ)ವಾಗಿಯು ಜಾತಕದಲ್ಲಿ ಕಾಣಬರುತ್ತದೆ. ಈ ಶುಭ-ಪಾಪ ಕರ್ಮಗಳನ್ನು ತಿಳಿಯುವ ಏಕೈಕ ಸಾಧನ ಜ್ಯೋತಿಷಶಾಸ್ತ್ರ. ಮನುಷ್ಯ ಯಾವಕಾಲದಲ್ಲಿ ಯಾವಕರ್ಮಮಾಡಿದಯೆಂಬುವ ವಿವರವನ್ನು ಗ್ರಹಗಳ ಮೂಲಕ ಜ್ಯೋತಿಷಶಾಸ್ತ್ರದಲ್ಲಿ ಅಧ್ಯಯನ ಮಾಡಬಹುದು. ಹಾಗಾಗಿ ಜ್ಯೋತಿಷಶಾಸ್ತ್ರ ಕಾಲ ಮತ್ತು ಮನುಷ್ಯನ ಕರ್ಮ ಇದೆರಡರಮೇಲೆ ಕೆಲಸಮಾಡುತ್ತದೆ.

ಜಾತಕ = ಜೀವಿಯ ಜನನಕಾಲ + ಜೀವಿಯ ಪ್ರಾಚೀನ ಕರ್ಮ.  ಗ್ರಹಗಳು ಕಾಲವನ್ನು ಸೂಚಿಸುವ ಸೂಚಿಕೆಯಂತೆ ವರ್ತನೆ ಮಾಡುತ್ತವೆ. ಈ ಅತ್ಯಾಧುನಿಕೆಯ ಕಾಲದಲ್ಲಿ ನಾವು ಸಮಯವನ್ನು ತಿಳಿಯುವುದಕ್ಕೆ ಗಡಿಯಾರವನ್ನು ಉಪಯೋಗಿಸುತ್ತಿದ್ದೇವೆ. ಗಡಿಯಾರದಲ್ಲಿರುವ ಸೂಚಿಕೆಗಳ ಸಹಾಯವಾಗಿ ಗಂಟೆಗಳು, ನಿಮಿಷಗಳು, ಸೆಕೆಂಡುಗಳು ತಿಳಿಯುತ್ತಿದ್ದೇವೆ. ಅಂದರೇ ಇಲ್ಲಿ ಗಡಿಯಾರದಲ್ಲಿರುವ ಸೂಚಿಕೆಗಳು ಕೇವಲ ಸಮಯವನ್ನು ಮಾತ್ರ ಗುರ್ತಿಸುವುದಕ್ಕೆ ಸಹಾಯವಾಗುತ್ತದೆ.  ನಾವು ಮಾಡುವ ಎಲ್ಲ ಕೆಲಸಗಳಿಗೆ ಅದು ಕಾರಣವಾಗುವದಿಲ್ಲ. ಗಡಿಯಾರದ ಸೂಚಿಕೆಯಂತೆಯೇ ನವಗ್ರಹಗಳು ರಾಶಿಗಳಲ್ಲಿ ಸಂಚರಿಸುತ್ತಾ ಪ್ರಾಚೀನ ಜನರಿಗೆ ಸಮಯವನ್ನು ತಿಳಿಸುತ್ತಿತ್ತು. ನಾವು ಉಪಯೋಗಿಸುವ ಗಡಿಯಾರದಲ್ಲಿರುವ ಮೂರು ಸೂಚಿಕೆಗಳು ಮೂರು ವಿಷಯಗಳನ್ನು ಮಾತ್ರ ಸೂಚಿಸುತ್ತೆ (ಗಂಟಿ, ನಿಮಿಷ, ಸೆಕೆಂಡು), ಆದರೇ ರಾಶಿ, ಗ್ರಹ, ನಕ್ಷತ್ರ ಸಹಿತವಾದ ಈ ವಿಶ್ವ ಗಡಿಯಾರ ದಲ್ಲಿ  ಸೂಚಿಕೆಗಳು ಇದ್ದಾವೆ ಅವು ಸೂರ್ಯ, ಚಂದ್ರ, ಕುಜ, ಬುಧ, ಗುರು, ಶುಕ್ರ, ಶನಿ ಮತ್ತು ಎರಡು ಚಾಯಾಗ್ರಹಗಳು ರಾಹು-ಕೇತು. ಈ ಗ್ರಹಗಳು 14 ಲೋಕಗಳಿಗೆ ಸಮಯವನ್ನು ತಿಳಿಸುತ್ತದೆ. ಹೋರ, ಲಗ್ನ, ದಿನ, ಪಕ್ಷ, ಆಯನ, ಸಂವತ್ಸರ, ಯುಗ, ಮಹಾಯುಗ, ಕಲ್ಪ, ಬ್ರಹ್ಮವರ್ಷ ಮೊದಲಾದ ಕಾಲದ ಪ್ರಮಾಣಗಳನ್ನು ಈ ವಿಶ್ವಗಡಿಯಾರದ ಸಹಾಯವಾಗಿ ಗುರ್ತಿಸಬಹುದು. ಜಾತಕದಲ್ಲಿರುವ ಗ್ರಹಗಳು ಜನನ ಸಮಯವನ್ನು, ಮನುಷ್ಯಮಾಡಿದ ಪ್ರಾಚೀನ ಕರ್ಮದ ಪ್ರಮಾಣವನ್ನು ಸೂಚಿಸುತ್ತದೆಯಷ್ಟೇ ಆದರೇ ಮನುಷ್ಯನು ತಾನು ಮಾಡಿದ ಕರ್ಮಕ್ಕೆ ಗ್ರಹಗಳು ಭಾದ್ಯರಾಗುವದಿಲ್ಲ. ಮನುಷ್ಯನ ಸುಖದುಖಃಗಳಿಗೆ ಗ್ರಹಗಳು ಕಾರಣವಾಗುವದಿಲ್ಲ. ಈ ವಿಷಯವನ್ನು ನಾವು ಗಟ್ಟಿಯಾಗಿ ಮನನ ಮಾಡಬೇಕು. ಮನುಷ್ಯನು ತಾನು ಮಾಡಿದ ಪೂರ್ವಕರ್ಮಗಳೆ ಸುಖದುಃಖಗಳಿಗೆ ಕಾರಣವಾಗುತ್ತದೆಯಂತ ಜ್ಞಾನಿಗಳ ವಚನ. ಈ ವಿಷಯವನ್ನು ಸರಿಯಾಗಿ ತಿಳಿದರೇ ನಮಗೆ ಗ್ರಹಗಳ ವಿಷಯದಲ್ಲಿ ಯಾವ ತಾರತಮ್ಯಭೇದಾಭಿಪ್ರಾಯಗಳು ಹುಟ್ಟುವದಿಲ್ಲ, ಚಿಂತಿಸಬೇಕಾದ ಅಗತ್ಯವೂ ಇರುವುದಿಲ್ಲ.

ದೋಷದ ವಿಷಯಕ್ಕೆ ಬಂದರೇ ಜನ್ಮಾಂತರದಲ್ಲಿ ಮತ್ತು ಕಾಲಾಂತರದಲ್ಲಿ ಮಾಡಿದ ಪಾಪಕಾರ್ಯಗಳು ದೋಷಗಳಾಗಿ ಜಾತಕದಲ್ಲಿ ತಿಳಿಯಬರುತ್ತದೆ. ಮನುಷ್ಯರ ಜಾತಕದಲ್ಲಿ ತಾರತಮ್ಯ ವಿಷಯಕ್ಕೆ ಬಂದರೇ ಎಲ್ಲ ಮನುಷ್ಯರೂ ಒಂದೇ ರೂಪವಾದ ಕ್ರಿಯಗಳು, ಕರ್ಮಗಳು ಮಾಡುವದು ಅಸಾಧ್ಯ. ಹಾಗಾಗಿ ಎಲ್ಲರ ಜಾತಕದಲ್ಲಿ ದೋಷಗಳು ಭಿನ್ನವಾಗಿರುತ್ತವೆ. ಹಾಗಾಗಿ ಅವರವರ ಕರ್ಮದ ಪ್ರಮಾಣವನ್ನು ಹಿಡದು ಅವರವರ ಜಾತಗಳಲ್ಲಿ ಶುಭ-ಪಾಪ ವಿಷಯಗಳ ಬಲಾಭಲಗಳು ಹೊಂದಿರುತ್ತವೆ.

 ಗ್ರಹಗಳು ಸೂಚಿಸುವ ಸಮಯಕ್ಕು-ಮನುಷ್ಯ ಮಾಡಿದ ಕರ್ಮಕ್ಕೂ ಇರುವ ಸಂಭಂದವೆಂತ್ತಾದ್ದು?

                 ಈಗಿನ ಕಾಲದಲ್ಲಿ ಗ್ರಹಗಳ ಪ್ರಸ್ತಾವನೆ ಬಂದಾಗ ನೆನಪಾಗುವದು, ಮನಸ್ಸಲ್ಲಿ ಸ್ಮರಣೆಯಾಗುವದು ಜಡಗೋಳಗಳು ಮಾತ್ರವೇ (Physical Shape of the Planets) . ಆದರೇ ಜ್ಯೋತಿಷಶಾಸ್ತ್ರವನ್ನು ಅಧ್ಯಯನ, ಅಭ್ಯಾಸ ಮಾಡುವವರು ಹಾಗೆ ಚಿಂತನೆಮಾಡತಕ್ಕದ್ದಲ್ಲ. ಒಂದು ಉದಾಹರಣೆ ನೋಡೋಣ

ಸಂಸ್ಕೃತದಲ್ಲಿ ಅಗ್ನಿ, ಕನ್ನಡದಲ್ಲಿ ಬೆಂಕಿ, ಆಂಗ್ಲದಲ್ಲಿ ಫೈರ್ ಮೊದಲಾದ ಪದಗಳಿಗೆ ಅರ್ಥ ನಮಗೊಂದೇ ಕಾಣುತ್ತದೆ. ಅಜ್ಞಾನಿಗಳಿಗೆ ಮತ್ತು ಹೇತುವಾದಿಗಳಿಗೆ ಹೋಮದಲ್ಲಿರುವ ಬೆಂಕೆಗೆ, ಸಿಗರೇಟಿನಲ್ಲಿರುವ ಬೆಂಕಿಗೆಗೆ ವ್ಯತ್ಯಾಸಗೊತ್ತಾಗುವದಿಲ್ಲ. “ಅಗ್ನಿ” ಯೆಂಬುವ ಸಂಸ್ಕೃತ ಪದದ ಅರ್ಥ ಜಡವಸ್ತುವನ್ನು ವರ್ಣನೆ ಮಾಡುವದಿಲ್ಲ. ಇಲ್ಲಿ ಅಗ್ನಿಯೆಂದರೆ ವೈಶ್ವಾನರರೂಪದಾರಿಯಾದ ಭಗವಂತ. ಕನ್ನಡದಲ್ಲಿ ಬೆಂಕಿ, ಆಂಗ್ಲದಲ್ಲಿ Fire ಶಬ್ಧಕ್ಕೆ ನಮಗೆ ಭಗವಂತನ ಅನುಸಂದಾನ ಬರುವದಿಲ್ಲ. ಹಾಗೆಯೇ “ಗುರುಗ್ರಹ” ಯೆಂಬುವ ಸಂಸ್ಕೃತ ಶಬ್ಧಕ್ಕು ಜುಪಿಟರ್ ಯೆಂಬುವ ಆಂಗ್ಲ ಶಬ್ಧಕ್ಕು ವ್ಯತ್ಯಾಸ ಮೇಲೆ ಹೇಳಿದಂತೆಯೇ ಆಗುತ್ತದೆ. “ಗುರು” ಎಂಬ ಪದಕ್ಕೆ ಸಂಸ್ಕೃತಾರ್ಥ ಜ್ಞಾನಿ, ದೇವಗುರುವಾದ ಬೃಹಸ್ಪತಿ, ಪುಣ್ಯಕಾರಕ, ಶುಭಕಾರಕನು ಯೆನ್ನುವ ಅನುಸಂದಾನ ಬರುತ್ತದೆ. ಕನ್ನಡ ಮತ್ತು ಅನ್ಯಭಾಷಗಳಲ್ಲಿ ನೋಡಿದಾಗ ಗ್ರಹಗಳು ಖಗೋಳದಲ್ಲಿರುವ ಗ್ರಹಗೋಳವಾಗಿ, ಜಾತಕದಲ್ಲಿ ಕಾಣುವ ಅಕ್ಷರಗಳಂತೆ ಚಿಂತನೆಮಾಡುವ ಸಂಧರ್ಭ ನಮದಾಗಿದೆ. ಜ್ಯೋತಿಷಶಾಸ್ತ್ರವನ್ನು ಅಧ್ಯಯನ ಮತ್ತು ಅಭ್ಯಾಸಮಾಡುವವರು ಕಾಲದ ಪ್ರಸಂಗ ಬಂದಾಗ ಜಡಗ್ರಹಗಳ ಗತಿಯನ್ನು, ಕರ್ಮವಿಷಯ ತಿಳಿಯುವಾಗ ಅಭಿಮಾನದೇವತೆಯಾಗಿ ಚಿಂತನೆ ಮಾಡತಕ್ಕದ್ದು.

                ನಾವು ಇಲ್ಲಿನವರಿಗೂ ಮನುಷ್ಯ ತಾನನುಭವಿಸ್ತುತ್ತಿರುವ ಸುಖದುಃಖಗಳಿಗೆ ಪ್ರಾಚೀನ ಕರ್ಮಗಳೇ ಕಾರಣವೆಂದು ತಿಳಿದಿದ್ದೇವೆ. ಮನುಷ್ಯನು ತಾನು ಮಾಡಿದ ಶುಭ-ಪಾಪ ಕರ್ಮಗಳ ತಿಳಿಯುವುದಕ್ಕೆ, ಪ್ರಾಯಶ್ಚಿತ್ಯಾದಿಗಳನ್ನು ಮಾಡುವುದಕ್ಕೆ, ಅನಕೂಲ-ಪ್ರತಿಕೂಲ ಕಾಲಗಳನ್ನು ತಿಳಿಯುವುದಕ್ಕೆ, ಮೋಕ್ಷಗಮನವನ್ನು ಅರಿಯಲಿಕ್ಕೆ ಭಗವಂತತೋರಿಸಿದ ಮಾರ್ಗ ಜ್ಯೋತಿಷಶಾಸ್ತ್ರಾಧ್ಯಯನ. ಮನುಷ್ಯನ ಜನ್ಮಾಂತರ ಮತ್ತು ಕಾಲಂತರ ಕರ್ಮವನ್ನು ತಿಳಿಯುವುದಕ್ಕೆ ಗ್ರಹಗಳ ಮೂಲಕವಾಗಿ ಕರ್ಮರಹಸ್ಯವನ್ನು ಜ್ಯೋತಿಷಶಾಸ್ತ್ರದಲ್ಲಿ ಹೇಳಿದ್ದಾನೆ. ಗ್ರಹಗಳ ಮೂಲಕ ಕರ್ಮಸಿದ್ಧಾಂತವನ್ನು ಚಿಂತನೆ ಮಾಡುತ್ತಾ ಮನುಷ್ಯನು ತಾನು ಮಾಡಿದ ಶುಭ-ಪಾಪ ಕರ್ಮಗಳನ್ನು ಅದರ ತೀವ್ರತೆ, ಪರಿಣಾಮಗಳನ್ನು ಜಾತಕದಿಂದ ತಿಳಿಯಬಹುದು.

ಜಾತಕವೆಂದರೇ ಮನುಷ್ಯನು ಬಯಸುವ ಲೌಖಿಕಸುಖ-ಸಂಪತ್ತನು ಕೊಡುವ ಚಕ್ರವಲ್ಲ. ಶಾಲೆಯಲ್ಲಿ ವಿದ್ಯಾರ್ಥಿಗಳ ಪ್ರತಿಭೆಯನ್ನು ವರ್ಷಕ್ಕೊಂದುಬಾರಿ ಪರೀಕ್ಷಮಾಡಿ (Exam) ಅವರ ಪ್ರತಿಭೆಗೆ ಚಿಹ್ನವಾಗಿ ಪ್ರತಿಭಾಪತ್ರವನ್ನು ನೀಡುತ್ತಾರೆ(Progress Report). ಈ(Progress Report) ಆಧಾರವಾಗಿ ಉನ್ನತವಿದ್ಯೆ, ಉದ್ಯೋಗಾವಕಾಶಗಳು ಬರುತ್ತವೆ. ಜೀವನನಿರ್ವಹಣಕ್ಕೆ ಬೇಕಾದ ಧನಸಂಪಾದನೆ ಮಾಡುವುದು ಸುಲಭತರವಾಗುತ್ತದೆ. ಅಥವಾ (Progress Report) ನಲ್ಲಿ ಕಡಿಮೆ ಪ್ರತಿಭೆಯನ್ನು ತೋರಿಸಿದ ವಿದ್ಯಾರ್ಥಿ ಉನ್ನತ ವಿದ್ಯಾಭ್ಯಾಸವನ್ನು ಮಾಡುವುದಕ್ಕೆ ಅವಕಾಶಸಿಗದೇ, ಒಳ್ಳೆಯ ಉದ್ಯೋಗವನ್ನು ಹೊಂದದೇ, ಜೀವನ ನಿರ್ವಹಣೆಗೆ ಬೇಕಾದ ಧನವನ್ನು ಸಂಪಾದಿಸುವುದು ಬಹಳ ಕಷ್ಟತರವಾಗುತ್ತದೆ. ಅದೇರೀತಿಯಲ್ಲಿ ಮನುಷ್ಯನು ಜನ್ಮಾಂತರದಲ್ಲಿ, ಕಾಲಾಂತರದಲ್ಲಿ ಮಾಡಿದ ಶುಭ-ಅಶುಭ ಕರ್ಮಗಳನ್ನು, ಪುಣ್ಯ-ಪಾಪ ಸಂಭಂದಗಳನ್ನು ಜಾತಕವೆಂಬುವ ಪ್ರತಿಭಾ ಪತ್ರವನ್ನು (Birth Progress Report) ಜನ್ಮತಾಳುವಾಗ ಪಡೆಯುತ್ತಾನೆ. ಮನುಷ್ಯನಿಗೆ ವರ್ತಮಾನ ಜನ್ಮಗಳಲ್ಲಿ ಮಾಡಿದ ಕರ್ಮದ ವೃತ್ತಾಂತ ತಿಳಿಯುವದಿಲ್ಲ. ಸಾಧನೆಯನ್ನು ಮಾಡಬೇಕಾದರೆ ಅಥವಾ ತಾನು ಮಾಡಿದ ಹಿಂದಿನ ಕರ್ಮ ತಿಳಿಯಬೇಕಾದರೆ, ತಾನು ನಡಯುತ್ತಿರುವ ಮಾರ್ಗವನ್ನು ಗುರ್ತಿಸಬೇಕಾದಶಾಸ್ತ್ರವೆಂದರೇ ಅದು ಯಾವಕಾಲಕ್ಕೂ ಜ್ಯೋತಿಷಶಾಸ್ತ್ರವೊಂದೇ. ಜೀವನದಲ್ಲಿ ಸದಾಚಾರ-ಸತ್ಕರ್ಮಗಳನ್ನು ಆಚರಿಸುತ್ತಾ, ಎಲ್ಲರ ಹಿತವನ್ನು ಬಯಸುತ್ತಾ, ವರ್ಣಾಶ್ರಮಧರ್ಮಕ್ಕೆ ಅನುಗುಣವಾಗಿ ನಡೆಯುತ್ತಾ, ತಾಯಿ-ತಂದೆ-ಗುರು-ಹಿರಿಯರನ್ನ ಗೌರವಿಸುತ್ತಾ, ತನಗೆ ನಿರ್ದೇಶಿಸಿರುವ ಕರ್ತವ್ಯಗಳನ್ನು ಸಕಾಲದಲ್ಲಿ ಆಚರಿಸುತ್ತಾ,  ಭಗವಂತನನ್ನು ನಿತ್ಯವೂ ಆರಾಧಿಸುತ್ತಾ ಇರುವ ಮನುಷ್ಯ ಎಷ್ಟುಬಾರಿ ಭೂಮಿಯಲ್ಲಿ ಜನ್ಮತಾಳಿದರೂ ಜಾತಕದಲ್ಲಿ ಗ್ರಹಗಳೆಲ್ಲಾ ಶುಭಸ್ಥಾನದಲ್ಲಿದ್ದು, ತಾನು ಮಾಡಿದ ಶುಭವಿಷಯಗಳನ್ನೇ, ಅನುಭವಯೋಗ್ಯ ಸಮಯವನ್ನು ಸೂಚಿಸುತ್ತಿರುತ್ತವೆ. ಸದಾಚಾರ ಇಲ್ಲದೇ ದುಷ್ಕರ್ಮಗಳನ್ನು ಆಚರಿಸುತ್ತಾ, ಅನಗತ್ಯವಾದ ಧನವನ್ನು ಸಂಪಾದಿಸುತ್ತಾ, ಸ್ವಂತಹಿತಕ್ಕೇ ಹೆಚ್ಚು ಪ್ರಾಧಾನ್ಯತೆಯನ್ನು ಕೊಡುತ್ತಾ, ಜನರನ್ನು ಪೀಡಿಸುತ್ತಾ, ಗುರುಹಿರಿಯರನ್ನು ದ್ವೇಷಿಸುತ್ತಾ, ಶಾಸ್ತ್ರಗಳನ್ನು, ಭಗವಂತನನ್ನು ನಿಂದಿಸುತ್ತಿರುವ ಮನುಷ್ಯನು ಎಷ್ಟುಬಾರಿ ಹುಟ್ಟಿದರೂ ಜಾತಕದಲ್ಲಿರುವ ಗ್ರಹಗಳು ಅಶುಭವಿಷಯಗಳನ್ನು ಸೂಚಿಸುತ್ತದೆ. ತತ್ಪಲವಾಗಿ ಈಗಿನ ಜನ್ಮದಲ್ಲಿ ದೋಷಗಳಾಗಿ ವ್ಯವಹರಿಸುತ್ತಾ ಕಷ್ಟ-ನಷ್ಟಗಳಿಗೆ ಕಾರಣವಾಗುತ್ತದೆ.  ಅಂದರೆ “ಜನ್ಮಾಂತರದಲ್ಲಿ ನೀನು ಇಂತಹಾ ಪಾಪ ಕೃತ್ಯಗಳನ್ನು ಮಾಡಿದ್ದಿಯಾ” ಅಂತ ಗ್ರಹಗಳು ದೋಷಗಳಮೂಲಕವಾಗಿ ಸೂಚಿಸುತ್ತವೆ. ಬೃಹಜ್ಜಾತಕದಲ್ಲಿ ವರಾಹಮಿರಾಚಾರ್ಯರು ಹೀಗೆ ಹೇಳಿದ್ದಾರೆ.

“ಕರ್ಮಾರ್ಜಿತಂ ಪೂರ್ವಭವೇ ಸದಾದಿ ಯತ್ತಸ್ಯ ಪಕ್ತಿಂ ಸಮಭಿವ್ಯನಕ್ತಿ”

                 ಅಂದರೇ “ಮನುಷ್ಯನು ಮಾಡಿದ ಶುಭ-ಪಾಪ-ಮಿಶ್ರಮವಾದ ಕರ್ಮಗಳ ಫಲವನ್ನು, ಅನುಭವಯೋಗ್ಯಕಾಲವನ್ನು (ಅನುಭವಿಸಬೇಕಾದಕಾಲವನ್ನು) ಗ್ರಹಗಳಮೂಲಕ ತಿಳಿಯಬಹುದು”. ಇಲ್ಲಿ ಕರ್ಮಸಿದ್ಧಾಂತವೇ ಪ್ರಧಾನವಾಗುತ್ತದೆ. ಜಾತಕವಾದಾರವಾಗಿ ಗ್ರಹಗಳಸ್ಥಿತಿಗತಿಗಳನ್ನು, ಸೂಚಿಸುವ ಕರ್ಮವನ್ನು ಶ್ರದ್ಧೆಯಿಂದ ತಿಳಿದು ತನ್ನ ವಿಚಕ್ಷಣೆಯ ಜ್ಞಾನದಿಂದ ಫಲನಿರ್ಣಯವನ್ನು ಮಾಡಬೇಕು.

 

 
Leave a comment

Posted by on 06/02/2015 in Vedic Astrology

 

25-Jan-2015 VEDIC ASTROLOGY WORKSKP – Summery

ಒಂದೇ ಜಾತಕವನ್ನು ಹತ್ತು ಜನ ಜ್ಯೋತಿಷಪಂಡಿತರು ಪರಿಶೀಲನೆ ಮಾಡಿದಾಗ ಒಂದೇರೀತಿಯಾದ ಫಲ ಏಕೆ ಬರುವುದಿಲ್ಲ?

ಮನುಷ್ಯನ ಸ್ವಭಾವ, ಅಲೋಚನೆಮಾಡುವ ವಿಧಾನ ಭಿನ್ನವಾದದ್ದು. ಒಬ್ಬರ ಅಲೋಚನೆಮಾಡುವ ವಿಧಾನ ಇನ್ನೊಬ್ಬರಿಗೆ ಸಮಾನವಾಗುವುದಿಲ್ಲ. ವ್ಯತ್ಯಾಸವಿರುತ್ತದೆ. ಒಂದು ಗಣಿತದ ಉದಾಹರಣೆನೋಡಿದಾಗ 9 x 2 = 18 ಇದು ಸತ್ಯ. ಜ್ಯೋತಿಷಶಾಸ್ತ್ರದಲ್ಲಿ ಈ ಸೂತ್ರಗಳು ಅನ್ವಯವಾಗುವುದಿಲ್ಲ. ಒಂದೇ ಗ್ರಹಸ್ಥಿತಿ ಇರುವ ಯಾವ ಎರಡು ಜಾತಕಗಳ ಫಲ ಒಂದೇ ರೀತಿಯಲ್ಲಿರುವುದಿಲ್ಲ. ಇದಕ್ಕೆ ಕಾರಣ ಜ್ಯೋತಿಶ್ಕನ ಆಲೋಚನಾ ವಿಧಾನ ಮತ್ತು ಕರ್ಮಸಿದ್ಧಾಂತ. ಪ್ರಾಚೀನಕಾಲದಲ್ಲಿ ಮಹರ್ಷಿಗಳು, ಪಂಡಿತರು ಒಂದೇರೀತಿಯಲ್ಲಿರುವ ವಾತಾವರಣದಲ್ಲಿ ವಿದ್ಯೆಯನ್ನು ಅಧ್ಯಯನಮಾಡಿದ್ದರು. ಆದಕಾರಣ ಅವರ ಜ್ಯೋತಿಷಶಾಸ್ತ್ರ ಅಧ್ಯಯನ ಮತ್ತು ಅಭ್ಯಾಸ ಒಂದೇ ರೀತಿಯಲ್ಲಿ ಇರುತ್ತಿತ್ತು. ಈಗಿನ ಪರಿಸ್ಥಿತಿ ನೋಡಿದರೇ ಪ್ರಾಚೀನಕಾಲಕ್ಕೆ ಭಿನ್ನವಾದ ವಾತವರಣ ನೆಲಗೊಂಡಿದೆ. ಪ್ರತಿಯೊಬ್ಬರೂ ಬೇರೆಬೇರೆ ವಾತಾವರನದಲ್ಲಿ ಬೇರೆಬೇರೆ ವಿಷಯಗಳಲ್ಲಿ ವಿದ್ಯಾಭ್ಯಾಸ ಮಾಡಿದ್ದ್ದಾರೆ. ಜ್ಯೋತಿಷಶಾಸ್ತ್ರವನ್ನು ಪ್ರಥಮ ಕರ್ಥವ್ಯವಿದ್ಯಯಾಗಿ ಯಾರೂ ಅಭ್ಯಾಸಮಾಡುತ್ತಿಲ್ಲ. ವಯಸ್ಸುಮೀರಿದವರು ಕಾಲಕ್ಷೇಪದ ಸಲವಾಗಿ, ಜಾತಕಫಲ ಹೇಳುವುದರಿಂದ ಬರುವ ಕೀರ್ಥಿ, ಧನಸಂಪಾದನೆಗಾಗಿ ಈ ಶಾಸ್ತ್ರವನ್ನು ಆತ್ಯಾಧುನಿಕತೆಯ ಪ್ರಮಾಣಗಳಿಂದ ಅಧ್ಯಯನ ಮಾಡುತ್ತಿದ್ದಾರೆ. ಜ್ಯೋತಿಷಶಾಸ್ತ್ರದಲ್ಲಿರುವ ಗ್ರಹ, ರಾಶಿ, ನಕ್ಷತ್ರಗಳು ಮೊದಲಾದ ಖಗೋಳಶಾಸ್ತ್ರಕ್ಕೆ ಸಂಭಂದಪಟ್ಟಿರುವ ವಿಷಯವನ್ನು ಮಾತ್ರ ಅಭ್ಯಾಸಮಾಡುತ್ತಿದ್ದಾರೆ. ವೇದ, ಉಪನಿಷತ್ಸಾರಭೂತವಾದ ಧರ್ಮವನ್ನು, ಕರ್ಮಸಿದ್ಧಾಂತವನ್ನು, ಭಗವಂತನ ಅಸ್ತಿತ್ವವನ್ನು, ಸದಾಚಾರವನ್ನು, ವರ್ಣಾಶ್ರಮಧರ್ಮದಿಂದ ಕೂಡಿದ ಜ್ಯೋತಿಷಶಾಸ್ತ್ರವನ್ನು ಪ್ರತ್ಯೇಕವಾಗಿ ಯಾರೂ ಅಧ್ಯಯನ ಮಾಡುತ್ತಿಲ್ಲ. ಇಲ್ಲಿ ತಿಳಿಯಬೇಕಾದ ವಿಷಯವೇನೆಂದರೇ ಜ್ಯೋತಿಷಶಾಸ್ತ್ರ ಆಧುನಿಕ ವಿಜ್ಞಾನಶಾಸ್ತ್ರವಲ್ಲ. ಏಕೆಂದರೇ ಆಧುನಿಕ ಶಾಸ್ತ್ರಕ್ಕೆ ಮುಖ್ಯವಾದದ್ದು ಸೂತ್ರ (Formula). ಒಂದು ಸೂತ್ರವನ್ನು ಯಾವ ಪ್ರದೇಶದಲ್ಲಾದರೂ ಎಷ್ಟುಬಾರಿಯಾದರೂ ಪ್ರಯೋಗಿಸಿದರೇ ಒಂದೇ ರೀತಿಯಾದ ಫಲವನ್ನು ಕೊಡಬೇಕು. ಉದಾಹರಣೆಗೆ (a+b)2=a2+2ab+b2 ಈ ಸೂತ್ರವನ್ನು ಯಾವಸಂಧರ್ಭದಲ್ಲಾದರೂ, ಯಾವ ಪ್ರದೇಶದಲ್ಲಾದರೂ ನೋಡಿದರೇ ಒಂದೇ ಉತ್ತರ ಸಿಗುತ್ತದೆ. ಆದರೇ ಜ್ಯೋತಿಷಶಾಸ್ತ್ರದ ಮೂಲಕ ಜಾತಕದಲ್ಲಿ ತಿಳಿಸುವ ಫಲ ದೇಶ,ಕಾಲ, ಪರಿಷ್ತಿತಿಗಳಿಗೆ ಮತ್ತು ಮನುಷ್ಯಮಾಡಿದ ಪ್ರಾಚೀನಕರ್ಮಗಳಿಗೆ ಅನುಗುಣವಾಗಿ ಬದಲಾಗುತಿರುತ್ತದೆ. ಒಂದೇ ಕಾಲದಲ್ಲಿ ಹುಟ್ಟಿದ ಅವಳಿಮಕ್ಕಳ (Twins) ಜಾತಕ ಒಂದೇ ಆಗಿದ್ದರೂ ಅವರ ಸ್ವಭಾವ, ಬುದ್ಧಿ, ಆಲೋಚನಾಧೋರಣಿಯಲ್ಲಿ ವ್ಯತ್ಯಾಸ ಕಾಣಿಸುತ್ತದೆ.
ಇನ್ನು ಮೇಲಿನ ಪ್ರಶ್ನೆಬಗ್ಗೆ ನೋಡೋಣ. ಒಬ್ಬ ವೈಧೀಕಬ್ರಾಹ್ಮಣ, ವೈದ್ಯ, ನ್ಯಾಯವಾದಿ, ವ್ಯಾಪರಗಾರ ಮೊದಲಾದ ಬೇರೆಬೇರೆ ವೃತ್ತಿಯನ್ನು ನಿರ್ವರ್ತನೆ ಮಾಡುವ ಜನರು ಜ್ಯೋತಿಷಶಾಸ್ತ್ರವನ್ನು ಅಧ್ಯಯನಮಾಡಿದಾಗ ಅವರ ಆಲೋಚನೆಗೆ ಅನುಗುಣವಾಗಿ ಜ್ಯೋತಿಷಶಾಸ್ತ್ರದ ಸೂತ್ರಗಳನ್ನು ಉಪಯೋಗಿಸಿ ಜಾತಕದ ಫಲವನ್ನು ಹೇಳುತ್ತಾರೆ. ಅದರಕಾರಣವಾಗಿ ಜಾತಕ ವಿಶ್ಲೇಷಣೆ ಭಿನ್ನವಾಗಿರುತ್ತದೆ. ಫಲ ಹೇಳುವುದಕ್ಕೆ ಕೇವಲ ಗ್ರಹಗತಿಗಳ ಸಂಬಂದ ಸಾಲದು. ಜಾತಕವನ್ನು ಪರಿಶೀಲನೆಮಾಡುವಾಗ ಮನಸ್ಸನ್ನು ಯಾವರೀತಿ ಹೊಂದಿಸಬೇಕು ಯೆಂಬುವ ವಿಷಯವನ್ನು, ವಿಚಕ್ಷಣೆಯನ್ನು ಹೊಂದಿರಬೇಕು. ಅದಕ್ಕಾಗಿಯೇ ನಮ್ಮ ಪ್ರಾಚೀನರು ಜ್ಯೋತಿಷಶಾಸ್ತ್ರವನ್ನು ಒಂದು ಪವಿತ್ರವಾದಶಾಸ್ತ್ರವಾಗಿ ಭಾವಿಸಿ ತಮ್ಮ ಉಪಾಸನಾಬಲ, ದೈವಬಲದಿಂದ ಜಾತಕಫಲವನ್ನು ವಿಶ್ಲೇಷಣೆ ಮಾಡುತ್ತಿದ್ದರು. ಹಾಗಾಗಿ ಜ್ಯೋತಿಷಶಾಸ್ತ್ರಾಧ್ಯಯನಕ್ಕೆ, ಫಲ ನಿರ್ದಾರಣೆಗೆ ದೈವಬಲ ಅಂಟಿರಬೇಕು. ದೈವಬಲದಿಂದ ಮಾತ್ರ ಜಾತಕಫಲ ನಿರ್ದಾರಣೆ ಸಾಧ್ಯ.

ಈ ಅತ್ಯಾಧುನೆಕೆಯ ಕಾಲದಲ್ಲಿ (Modern Times) ಜ್ಯೋತಿಷಶಾಸ್ತ್ರದ ಅವಶ್ಯಕತೆ

ಎಲ್ಲ ಸಂಸಾರವ್ಯವಹಾರಗಳನ್ನು ತೊರದು ಕಾಡಿಗೆಹೋಗಿ ತಪಸ್ಸಲ್ಲಿ ಮಘ್ನವಾಗಿ, ಪ್ರಾಪಂಚಿಕವಿಷಯಗಳಲ್ಲಿ ಮಮತೆ-ಅನುರಾಗಗಳಿಗೆ ಸದಾಕಾಲ ದೂರವಾಗಿ ಮೋಕ್ಷವನ್ನು ಪಡೆಯುವ ಬಯಕೆಯಲ್ಲಿರುವ ಋಷಿಗಳು ಸಹಿತ ಜ್ಯೋತಿಷ್ಕನೊಬ್ಬನು ಕಾಣಿಸಿದರೇ ಸಾಕು ಅವರಮೂಲಕ ಬಹಳ ವಿಷಯಗಳನ್ನು ತಿಳಿಯುವುದರಲ್ಲಿ ಉತ್ಸಾಹಿತರಾಗಿರುತ್ತಾರೆ. ಸಂಸಾರವು ಜಡವೆಂದು ಉತ್ಸಾಹವನ್ನು ಕಳೆದುಕೊಂಡ ಸಾಧಾರಣ ಮನುಷ್ಯನು ಮತ್ತು ಐಹಿಕ ಭೋಗಗಳಿಗೆ ಒಳಗಾಗಿ ಯಂತ್ರಗಳ ಮಧ್ಯೆ ತಾವು ಕೂಡಾ ಯಂತ್ರಗಳಾಗಿ ಮಾನವತ್ವವನ್ನು, ವಿಚಕ್ಷಣೆಯಜ್ಞಾನವು (Commonsense) ಇಲ್ಲದವರಿಗೆ ಪ್ರತಿಯೊಂದು ಸಣ್ಣವಿಷಯದಲ್ಲಿಯ ಸಂಶಯ ಹುಟ್ಟುತ್ತದೆ. ತನ್ನ ಕೆಲಸದ ಅನುಕೂಲ-ಪ್ರತಿಕೂಲಗಳಬಗ್ಗೆ, ತಾನು ಹಿಡದ ಮಾರ್ಗದಲ್ಲಿ ಉಂಟಾಗುವ ಲಾಭಗಳು ಮತ್ತು ಸಮಸ್ಯೆಗಳಬಗ್ಗೆ, ಸಮಸ್ಯೆಯನ್ನು ಉಂಟುಮಾಡುವವರಬಗ್ಗೆ, ಧನಸಂಪಾದನೆ, ಮನಃಷಾಂತಿ, ಪತ್ನಿ-ಪುತ್ರರ ಪ್ರಾಪ್ತಿ-ಅಪ್ರಾಪ್ತಗಳ ಬಗ್ಗೆ, ವಿವಾಹವಾಗುವ ಸಮಯ, ವಿಳಂಭಕ್ಕೆ ಕಾರಣ, ಸಮಸ್ಯೆಗೆ ಪರಿಷ್ಕಾರ, ಪ್ರಯತ್ನದಲ್ಲಿ ಇತರಜನರು ಕೊಡುವ ಸಹಕಾರ-ಅಸಹಕಾರ, ವಿದ್ಯೆ, ಉದ್ಯೋಗಗಳಲ್ಲಿ ಅನುಕೂಲತೆ, ಪ್ರತಿಕೂಲತೆ, ದೈವೀಕವಾಗಿ ಪರಿಷ್ಕಾರಕ್ಕೆ ಬೇಕಾದ ಉಪದೇಶಗಳು ಮೊದಲಾದ ಸಾವಿರಾರು ಪ್ರಶ್ನೆಗಳು, ಸಂದೇಹಗಳು ನಮ್ಮ ಜೀವಿತದಲ್ಲಿ ಪ್ರತಿಕ್ಷಣವೂ ಎದುರಾಗುತಿರುತ್ತವೆ. ಕೆಲವು ಸಮಸ್ಯೆಗಳನ್ನು ಸ್ವಂತಬುದ್ಧಿಯಿಂದ ಇನ್ನು ಕೆಲವು ಪ್ರಶ್ನೆಗಳನ್ನು ಜ್ಞಾನಿಗಳ ಸಲಹೆಯ ಮೇರೆಗೆ ಸಮಸ್ಯೆಗಳನ್ನು ಪರಿಷ್ಕರಿಸಿಕೊಳ್ಳುತ್ತಿರುತ್ತಾನೆ. ವೇದಾಂಗಜ್ಯೋತಿಷಾನಂತರ ಬೆಳಕಿಗೆ ಬಂದಂತ ಅತ್ಯಂತಪ್ರಾಮುಖ್ಯವಾದ ಜ್ಯೋತಿಷಶಾಸ್ತ್ರ ಮನುಷ್ಯನಿಗೆ ಯಾವುದೇ ಸಮಸ್ಯೆಯನ್ನಾದರೂ ಪರಿಷ್ಕರಿಸಿಕೊಳ್ಳುವ ಧೈರ್ಯವನ್ನು ಉಂಟುಮಾಡುತ್ತಿದೆ. ಮನುಷ್ಯನಲ್ಲಿರುವ ನಿರಾಶೆಯನ್ನು ದೂರಮಾಡುತ್ತಿದೆ. ಐಹಿಕಸುಖಶಾಂತಿಗಳಬಗ್ಗೆ, ಅನುಭವಿಸುವ ಕಾಲ ಅದರ ಪರಿಣಾಮಗಳಬಗ್ಗೆ ಬೇಕಾದ ಜ್ಞಾನವನ್ನು ಜ್ಯೋತಿಷಶಾಸ್ತ್ರ ಮುಂಚಿತವಾಗಿ ಕೊಡುತ್ತದೆ.
ಮನುಷ್ಯನ ಕಣ್ಣಿಗೆ ಇರುವ ವಿಶಿಷ್ಟತೆ ಯಾವಮಟ್ಟದ್ದೋ ಜ್ಯೋತಿಷಶಾಸ್ತ್ರವೂ ವೇದಾಂಗಗಳಲ್ಲಿ ಅಷ್ಟೇ ವಿಶಿಷ್ಟವಾದದ್ದು. ವೇದಗಳಮೂಲಕ ತಿಳಿಯಬೇಕಾದ ಜ್ಞಾನವನ್ನು ಸ್ಥಳಸ್ಪರ್ಶವಾಗಿ(Exclusive) ತಿಳಿದು ಅನುಭೂತಿಯನ್ನುಪಡೆಯುವುದಕ್ಕೆ ಜ್ಯೋತಿಷಶಾಸ್ತ್ರವು ಸಹಕರಿಸುತ್ತದೆ. ಅಧ್ಯಾತ್ಮಿಕ ದೃಕ್ಪದದಲ್ಲಿ ವ್ಯವಹರಿಸುವ ಜ್ಯೋತಿಷಶಾಸ್ತ್ರವು ಮನೋವೈಜ್ಞಾನಿಕ ಕೋನದಲ್ಲಿ (Angle) ಮನುಷ್ಯರ ಸಮಸ್ಯೆಯನ್ನು ಪರಿಷ್ಕರಿಸಿಕೊಳ್ಳುವುದಕ್ಕೆ ಬೇಕಾದ ಉಪಾಯವನ್ನು ತೋರಿಸುತ್ತಿದೆ. ಜ್ಯೋತಿಷಶಾಸ್ತ್ರದ ಮೂಲಕ ಬರುವ ಸಮಸ್ಯೆಗಳನ್ನು ಅರಿಯುವುದರಿಂದ ಸಮಸ್ಯೆಗಳ ತೀವ್ರತೆಯು (Intensity) ಕಡಿಮೆಯಾಗುವುದು.
ಧರ್ಮವೆಂದರೇ ಮನುಷ್ಯನನ್ನು ಮಾನಸಿಕವಾಗಿ, ಶಾರೀರಕವಾಗಿ ಶಾಶ್ವತವಾದ ಸಂತೋಷವನ್ನು ಪಡೆಯುವುದಕ್ಕೆ ರೂಪುಗೊಂಡ ಸೂತ್ರಗಳು. ಜ್ಞಾನಿಗಳು ತಮ್ಮ ದಿವ್ಯಶಕ್ತಿಯಿಂದ ಧರ್ಮಕ್ಕೆ ಗಟ್ಟಿಯಾದ ತಳಮನೆ (Foundation) ಹಾಕಿದ್ದಾರೆ. ಮಾನವಧರ್ಮ, ಕಾಲಧರ್ಮ, ಆಪದ್ಧರ್ಮ ಅನುಗುಣವಾಗಿ ಹೇಳಿರುವ ಸೂಚನೆಗಳನ್ನು ದೇಶಕಾಲಪರಿಸ್ಥಿತಿಗಳ ಅನುಗುಣಗಾಗಿ ನಾವು ನಡದುಕೊಂಡರೆ ಮನುಷ್ಯನಿಗೆ ಯಾವುದೇರೀತಿಯಾದ ಸಮಸ್ಯೆಗಳು ಬರುವದಿಲ್ಲ. ಇದಕ್ಕೆ ವಿಪರೀತವಾಗಿ ನಡದುಕೊಂಡರೇ ಸಮಸ್ಯೆಗಳು ಎದುರಾಗಿ ಅದರ ತೀವ್ರತೆಯೂ ಕೂಡಾ ಹೆಚ್ಚಾಗುವುದರಲ್ಲಿ ಯಾವ ಸಂಶಯವೂ ಇಲ್ಲ. ಮನುಷ್ಯನು ತಾನು ಮಾಡಿದ ಅಪರಾಧವನ್ನು ಜಾತಕದ ಮೂಲಕ ತಿಳಿದು ಸರಿಪಡಿಸುವ ಮಾರ್ಗ ಜ್ಯೋತಿಷಶಾಸ್ತ್ರದಮೂಲಕ ಪಡಿಯಬಹುದು.
ಜ್ಯೋತಿಷಶಾಸ್ತ್ರವು ಕಾಲದಮೇಲೆ ಆಧಾರಪಟ್ಟಿದೆ. ಕಾಲವು ಅನಾಧಿ ಅಂದರೇ ಆದಿಯಿಲ್ಲದ್ದು. ಕಾಲಕ್ಕೆ ಎಲ್ಲ ವಿಷಯಗಳೂ ಸಂಭಂದವಿದೆ. ಹಾಗಾಗಿ ಜ್ಯೋತಿಷಶಾಸ್ತ್ರವು ಸೃಷ್ಠಿಯಲ್ಲಿರುವ ಸಮಸ್ಥ ಶಾಸ್ತ್ರಗಳಿಗೂ, ವಿಷಯಗಳಿಗೂ ಸಂಭಂದವಿರುವುದನ್ನು ತಿಳಿಯಬಹುದು. ಜ್ಯೋತಿಷಶಾಸ್ತ್ರದಮೂಲಕ ಸಮಸ್ಥ ವಿಷಯಗಳನ್ನು ತಿಳಿಯುವ ಅವಕಾಶವಿದೆ. ಇದೇ ಜ್ಯೋತಿಷಶಾಸ್ತ್ರವು ಕೃತ,ತ್ರೇತಾ,ದ್ವಾಪರಯುಗಗಳಲ್ಲಿ “ದಿವ್ಯದೃಷ್ಠಿಯಾಗಿ” ವ್ಯವಹರಿಸುತಿತ್ತು. ಜ್ಞಾನಿಗಳು ಇದೇ ದಿವ್ಯದೃಷ್ಟಿಯಿಂದ ವೇದದಸಾರ, ಕರ್ಮಸಿದ್ಧಾಂತ, ಧರ್ಮಶಾಸ್ತ್ರಗಳ ಸಂದೇಶದ ಅನುಭೂತಿ ಪಡೆಯುತ್ತಿದ್ದರು. ಮನುಷ್ಯನ ಸ್ವಭಾವ, ಮನಸ್ಸು, ಕಾಲಸ್ವರೂಪ, ಸಾಧನಾಮಾರ್ಗ, ದೇಶಕಾಲಪರಿಸ್ಥಿತಿಗಳನುಗುಣವಾಗಿ ಮಾಡಬೇಕಾದ ಕರ್ತವ್ಯಕರ್ಮಗಳನ್ನು ತಿಳಿಯುವುದಕ್ಕೆ ಮತ್ತು ಪಾಪಕರ್ಮಗಳನ್ನು ತಿಳಿದು ಪ್ರಾಯಶ್ಚಿತ್ಯಾದಿಗಳನ್ನು ಮಾಡಿಕೊಳ್ಳುವುದಕ್ಕೆ ಜ್ಯೋತಿಷಶಾಸ್ತ್ರದ ಪ್ರಯೋಜನವನ್ನು ಹೊಂದುತ್ತಿದ್ದರು.

ಜ್ಯೋತಿಷಶಾಸ್ತ್ರಕ್ಕೆ ಸಮಸ್ತ ಶಾಸ್ತ್ರಗಳ ಸಂಭಂದ
ಭಗವಂತ ಭಗವದ್ಗೀತೆಯಲ್ಲಿ ಷದ್ವಿದಿಗಳನ್ನು ತಿಳಿಸಿದ್ದಾನೆ. ಮನುಷ್ಯನಾದವನು ಕಲಿಯಬೇಕಾದ ವಿಷಯಗುಳೇ ಆರು ಮಾತ್ರ. ಈ ಸೃಷ್ಟಿಯಲ್ಲಿರುವ ಸಮಸ್ತಶಾಸ್ತ್ರಗಳೂ ಈ ಆರು ವಿಷಯಗಳಕೆಳಗೆ ಬರುತ್ತದೆ. ವೈಧೀಕ ವಿಜ್ಞಾನಶಾಸ್ತ್ರಗಳುಮನುಷ್ಯನ ಮಾನಸಿಕ ಸ್ಥಿತಿಯನ್ನು ಪ್ರಭಾವಿತಗೊಳುಸುತ್ತದೆ. ಅಧ್ಯಾತ್ಮಶಾಸ್ತ್ರಗಳೆಲ್ಲವೂ ಮನಃಶಾಸ್ತ್ರಗಳಾಗಿದೆ. ಮನುಷ್ಯನ ದೇಹರಚನೆಯಿಂದ ಹಿಡದು ಮನಸ್ಸು, ಬುದ್ಧಿ, ಆತ್ಮ, ಇಂದ್ರಿಯಾಭಿಮಾನಿ ದೇವತೆಗಳ ಪ್ರಭಾವ, ಅದರಮೇಲೆ ಕೆಲಸಮಾಡುವ ದೈವಶಕ್ತಿ, ಭಗವಂತನ ಸರ್ವೋತ್ತಮತ್ವವನ್ನು, ಮನುಷ್ಯನ ಕರ್ಮ ಮೊದಲಾದ ವಿಷಯಗಳನ್ನು ಈ ಆರುಶಾಸ್ತ್ರಗಳು ವಿವರಿಸುತ್ತವೆಲ್ ಅಷ್ಟೇ ಅಲ್ಲದೇ ಹಿಂದೂ ವೈಧೀಕ ವಿಜ್ಞಾನ ಶಾಸ್ತ್ರಗಳು ಅತಿ ಪ್ರಾಚೀನವಾದದ್ದು. ಹಿಂದಿನ ಋಷಿಗಳು, ಮುನಿಗಳು ತಮ್ಮ ಅಧ್ಯಾತ್ಮಚಿಂತನೆಯಿಂದ ವೈಧೀಕವಿಜ್ಞಾನ ಶಾಸ್ತ್ರಕ್ಕೆ ಅಧ್ಭುತವಾದ ತಳಮನೆ ಹಾಕಿದ್ದಾರೆ. ಅವರ ಮೂಲಕ ಈ ಶಾಸ್ತ್ರಗಳು ಬೆಳಕಿಗೆ ಬಂದು ಸೃಷ್ಟಿ, ಕಾಲಧರ್ಮಗಳನ್ನು ತಿಳಿಯುವ ಅತ್ಯಧ್ಬುತವಾದ ಶಾಸ್ತ್ರಗಳಾಗಿ ಹೆಸರನ್ನು ಪಡೆದಿವೆ. ಆ ವಿಜ್ಞಾನಶಾಸ್ತ್ರಗಳೇ
1. ಅದಿಭೂತವಿಜ್ಞಾನ
2. ಅಧ್ಯಾತ್ಮ ವಿಜ್ಞಾನ
3. ಅದಿದೈವ ವಿಜ್ಞಾನ

4. ಅದಿಯಜ್ಞ ವಿಜ್ಞಾನ
5. ಬ್ರಹ್ಮ ವಿಜ್ಞಾನ
6. ಕರ್ಮ ವಿಜ್ಞಾನ

1. ಅಧಿಭೂತ ವಿಜ್ಞಾನ (ಮೆಟೀರಿಯಲ್ ಸೈನ್ಸ್)
ಅದಿಭೂತವಿಜ್ಞಾನವೆಂದರೇ ಪಾಂಚಭೂತಗಳಾದ ಪೃಥ್ವಿ ಜಲ, ಅಗ್ನಿ, ವಾಯು, ಆಕಾಶ ಮೊದಲಾದ ಪದಾರ್ಥಗಳ ಮಿಶ್ರಣದಿಂದ ರೂಪುಗೊಂಡ ಜಡ, ಚೇತನದ ಸಮುದಾಯ. ಅದಿಭೂತವಿಜ್ಞಾನದಿಂದಾ ಜಡ, ಚೇತನ ವಸ್ತುಗಳ ಭೌತಿಕ ಲಕ್ಷಣಗಳನ್ನು ತಿಳಿಯಬಹುದು.ಉದಾಹರಣೆಗೆ ಮಾನವಶರೀರದಲ್ಲಿ ಭಾಗವಾದ ಚರ್ಮ, ಮಾಂಸದಪದಾರ್ಥ, ರಕ್ತ, ಮೋಳೆಗಳು ಮೊದಲಾದ ಎಲ್ಲವೂ ಪೃಥ್ವಿ, ಜಲ ಅಗ್ನಿ ಪದಾರ್ಥಗಳಿಂದ ರೂಪುಗೊಂಡಿದೆ. ನಾವು ತೆಗದುಕೊಳ್ಳುವ ಶ್ವಾಸ ವಾಯುತತ್ವವಾಗಿದೆ. ಮನಸ್ಸು, ಶರೀರದಲ್ಲಿರುವ ಖಾಲಿಪ್ರದೇಶ ಆಕಾಶತತ್ವವಾಗಿದೆ. ಜೀವನು ಈ ಶರೀರದಲ್ಲಿ ನಿವಾಸವಿರುವತನಕ ಪಂಚಭೂತಗಳಾದ ಅಗ್ನಿ, ಜಲ, ಪೃಥ್ವಿ, ವಾಯು, ಆಕಾಶ ಒಗ್ಗಟ್ಟಾಗಿ ಇರುತ್ತವೆ. ನಮ್ಮ ಶರೀರವನ್ನು ನಿಶ್ಚಿತವಾಗಿ ಪರಿಶೀಲನೆಮಾಡಿದರೆ ಪಂಚತ್ವವನ್ನು ಉಳ್ಳ ಈ ಶರೀರ ಜೀವ ಇರುವತನಕ ಒಗ್ಗಟ್ಟಾಗಿ ಇರುತ್ತದೆ. ಜೀವನು ಈ ಶರೀರವನ್ನು ಬಿಟ್ಟುಹೋದಾಗ ಶ್ವಾಸಕ್ರಿಯೆ ನಿಂತುಹೋಗುತ್ತದೆ ಅಂದರೇ ಶ್ವಾಸ ಪಂಚಭೂತಗಳಲ್ಲಿ ಒಂದಾದ ಗಾಳಿಯಲ್ಲಿ ಕಲೆತುಹೋಗುತ್ತದೆ. ಆದಮೇಲೆ ಶರೀರದಲ್ಲಿರುವ ಬಿಸಿ (ಅಗ್ನಿತತ್ವ) ಹೊರಗಿನ ವಾತಾವರಣದಲ್ಲಿ ಸೇರಿ ಶರೀರವನ್ನು ತಣ್ಣಗೆ ಮಾಡುತ್ತದೆ. ಶರೀರದಲ್ಲಿರುವ ಖಾಲಿ ಪ್ರದೇಶವೆಲ್ಲಾ ಮುಚ್ಚಲ್ಪಟ್ಟು ಆಕಾಶತತ್ವ ಹೊರಗೆ ಹೋಗುತ್ತದೆ. ಕಾಲಕ್ರಮವಾಗಿ ಈ ಶರೀರ ಮಣ್ಣೀನಲ್ಲಿ ಸೇರುತ್ತದೆ. ಹೀಗೆ ಪಂಚಭೂತಗಳೆಲ್ಲ ಶರೀರವನ್ನು ಬಿಟ್ಟುಹೋಗುವದನ್ನು ಪಂಚತ್ವವನ್ನು ಹೊಂದುವದು ಅತವಾ ಮರಣ ಅಂತ ಕರೆಯುತ್ತೇವೆ. ಅದೇರೀತಿಯಲ್ಲಿ ಸೃಷ್ಟಿಯಲ್ಲಿ ಭೌತಿಕವಾಗಿ ಜನಿಸಿದ ಪ್ರತಿಯೊಂದು ಜಡ, ಜೀವ ಪಧಾರ್ಥಗಳು ಕಾಲಾನುಗುಣವಾಗಿ ನಾಶವಾಗಿ ಪಂಚಭೂತಗಳಲ್ಲಿ ಸೇರಿಕೊಳ್ಳುತ್ತದೆ. ಇದೇ ಸೃಷ್ಟಿಧರ್ಮ. ಈ ವಿಷಯಗಳಬಗ್ಗೆ ತಿಳಿಸುವ ಶಾಸ್ತ್ರವೇ ಭೌತ ವಿಜ್ಞಾನ ಶಾಸ್ತ್ರ. ಇದರ ಆಧಾರವಾಗಿ ವೈಧ್ಯಶಾಸ್ತ್ರ ಅಭಿವೃದ್ಧಿ ಆಗಿದೆ.

2. ಅಧ್ಯಾತ್ಮ ವಿಜ್ಞಾನ (ಮೆಟಾ-ಫಿಸಿಕಲ್ ಸೈನ್ಸ್)
ಅಧ್ಯಾತ್ಮವಿಜ್ಞಾನವೆಂದರೇ ಜೀವದ ಭೌತಿಕಶರೀರವನ್ನು ಪ್ರಭಾವಿತಗೊಳುಸುವ ಮನಸ್ಸು, ಬುದ್ಧಿ, ಚಿತ್ತ, ಆತ್ಮ ಮೊದಲಾದ ವಿಷಯಗಳಬಗ್ಗೆ ಅಧ್ಯಯನ ಮಾಡುವದು. ಸಮಾಜದಲ್ಲಿ ಒಬ್ಬ ವ್ಯಕ್ತಿಯನ್ನು ಗುರ್ತಿಸುವುದಕ್ಕೆ ಮುಖ್ಯವಾಗಿ ಶರೇರದಿಂದಲೇ ಅಲ್ವೇ! ಆದರೇ ಶರೀರ ರಕ್ತ-ಮಾಂಸಗಳಿಂದ ಏರ್ಪಟ್ಟ ಜಡ ಸಮುದಾಯ. ಸೂಕ್ಷ್ಮವಾಗಿ ಆಲೋಚನೆ ಮಾಡಿದರೇ ಮೃತಶರೀರವೂ ಕೂಡಾ ಒಂದು ಶರೀರವೇ ಆದರೇ ಅದರಲ್ಲಿ ಮನುಷ್ಯನನ್ನು ಯಾರೂ ಗುರ್ತಿಸುವುದಿಲ್ಲ. ಹಾಗಾಗಿ ಮನುಷ್ಯನಿಗೆ ಮನಸ್ಸು, ಬುದ್ಧಿ ಅತ್ಯಂತ ಮುಖ್ಯವಾದ ವ್ಯವಸ್ಥೆಗಳೆಂದು ಇಲ್ಲಿ ಗ್ರಹಿಸಬೇಕು. ಇಲ್ಲಿ ಮನಸ್ಸು ಅನ್ನುವದು ಕೂಡಾ ಒಂದು ಗಣಕಯಂತ್ರವಿದ್ಧಂತೆ (ಕಂಪ್ಯೂಟರ್). ಮನಸ್ಸಿಗೆ ತಾನಾಗಿ ಆಲೋಚನೆಮಾಡುವ ಶಕ್ತಿಯಿಲ್ಲ. ಶಾಲಿಯ ಮಕ್ಕಳನ್ನು ಉದಾಹರಣೆಯಾಗಿ ತೆಗದುಕೊಂಡರೆ ಅವರು ಕಲಿಯುವ ಪಾಠ ಹೀಗಿರುತ್ತದೆ. ಕಣ್ಣು ನೋಡುತ್ತದೆ…ಕಿವಿ ಕೇಳುತ್ತದೆ….. ಮೂಗು ವಾಸನೆಯನ್ನು ಗ್ರಹಣಮಾಡುತ್ತದೆ.. ಆದರೇ ವಯಸ್ಸು ಬೆಳಿಯುತ್ತಿರುವಾಗ, ಉನ್ನತವಾದ ವಿಧ್ಯೆಯನ್ನು ಅಭ್ಯಾಸಮಾಡಿದಾಗ ಮೇಲೆ ಕಲಿತ ವಿಷಯಗಳು ಬದಲಾಗುತ್ತದೆ. ಅದು ಹೇಗೆಂದರೇ ಸಣ್ಣ ಮಗು ಕಣ್ಣು ನೋಡುತ್ತದೆ ಅಂತ ಉತ್ತರ ಕೊಡುತ್ತದೆ. ದೊಡ್ಡವನಾದಾಗ ಕಣ್ಣು ನೋಡುವುದಲ್ಲ, ನಾನು ನೋಡುತ್ತಿದ್ದೇನೆ, ಕಣ್ಣಿನ ಸಹಾಯದಿಂದ ನೋಡುತ್ತಿದ್ದೇನೆ ಅಂತ ಉತ್ತರ ಬದಲಾಗುತ್ತದೆ. ಆದೇ ರೀತಿಯಲ್ಲಿ ನಾನು ನೆಡೆಯುತ್ತಿದ್ದೇನೆ, ತಿನ್ನುತಿದ್ದೇನೆ, ಶಬ್ಧಗ್ರಹಣ ಮಾಡಿತ್ತಿದ್ದೇನೆ, ನಾನು ಆಲೋಚನೆ ಮಾಡುತ್ತಿದ್ದೇನೆ… ಯೆಂಬುವ ಉತ್ತರ ಪರಿವರ್ತನೆಯಾಗುತ್ತದೆ. ಅಂದರೇ ಮನಸ್ಸೇ ತಾನಾಗಿ ಆಲೋಚನೆ ಮಾಡುವುದಲ್ಲ, ಮನಸ್ಸಿನಿಂದ ನಾನು ಆಲೋಚನೆ ಮಾಡುತ್ತಿದ್ದೇನೆ ಯೆಂಬುವ ವಿಷಯವನ್ನು ಅರಿಯುತ್ತೇವೆ. ಇಲ್ಲಿ ಮನಸ್ಸು ಬುದ್ಧಿ ಕೂಡಾ ಒಂದು ವಸ್ತುವಿನಂತೆ ವರ್ತಿಸುತ್ತದೆ. ಕಾಲಾನುಗುಣವಾಗಿ ಶರೀರದಲ್ಲಿ ಬದಲಾವಣೆ ಆದರೂ, ಮನಸ್ಸಿನ ಆಲೋಚನಾಶಕ್ತಿ ಅಭಿವೃದ್ದಿಯಾದರೂ, ಬುದ್ಧಿ ಕುಶಲತೆಯಲ್ಲಿ ಬಲಿಷ್ಟವಾದರೂ ನಾನು ಯೆಂಬುವ ಪದ ಬದಲಾಗುವುದಿಲ್ಲ. ಮನುಷ್ಯ ಎಷ್ಟು ಜನ್ಮಗಳು ತಾಳಿದರೂ, ಯಾವ ಶರೀರವನ್ನು ಪಡೆದರೂ ಈ ನಾನು ಯೆಂಬುವ ಪದ ಶಾಶ್ವತವಾಗಿ ವರ್ತನೆಮಾಡುತ್ತದೆ. ಇದೇ ಆತ್ಮದ ಸ್ವಭಾವ ಲಕ್ಷಣವೆಂದು ಗ್ರಹಿಸಬೇಕು. ಮನುಷ್ಯನ ಸ್ವಭಾವ, ಮನಸ್ಸಿನ ಪ್ರಭಾವ, ಬುದ್ಧಿ, ಚಿತ್ತ ಮೊದಲಾದ ವಿಷಯಗಳನ್ನು ಮತ್ತು ಅದರ ಸಂಯೋಗದಿಂದ ಆಗುವ ಪರಿವರ್ತನೆಗಳನ್ನು ಈ ಅಧ್ಯಾತ್ಮ ವಿಜ್ಞಾನದಲ್ಲಿ ಅಧ್ಯಯನಮಾಡಬಹುದು.

3. ಆಧಿದೈವ ವಿಜ್ಞಾನ
ಜೀವಿಯಭೌತಿಕಶರೀರ, ಮನಸ್ಸು, ಬುದ್ಧಿ ಮೊದಲಾದ ಪ್ರತಿವೊಂದುಇಂದ್ರಿಯಗಳು ಕೂಡಾದೈವಶಕ್ತಿಯಆಧೀನದಲ್ಲಿಕೆಲಸಮಾಡುತ್ತವೆಯೆನ್ನುವ ಸತ್ಯವನ್ನು ತಿಳಿಸುವ ವಿಜ್ಞಾನಶಾಸ್ತ್ರ ಆಧಿಧೈವ ವಿಜ್ಞಾನ. ಮನಸ್ಸು, ಬುದ್ಧಿ, ಕಣ್ಣು, ಕಿವಿ ಮೊದಲಾದ ಎಲ್ಲ ಇಂದ್ರಿಯಗಳುತಾನಾಗಿ ಜೀವಿಯ ಇಚ್ಚೆಗೆ ತಕ್ಕಂತೆ ಕೆಲಸಮಾಡವದಿಲ್ಲ. ಉದಾಹರಣೆಗೆನಮ್ಮಕಣ್ಣುಎಷ್ಟುಆರೋಗ್ಯವಂತವಾದರೂಕತ್ತಲಿನಲ್ಲಿಕಾಣುವದಿಲ್ಲ. ಬೆಳಕುಇಲ್ಲದಕಡೆಕಣ್ಣಿಗೆಕೆಲಸವಿಲ್ಲ. ಕಣ್ಣಿನಶಕ್ತಿವ್ಯಕ್ತವಾಗುವದುಬೆಳಕಿರುವಕಡೆಮಾತ್ರ. ಇಡೀಜಗತ್ತಿಗೆಬೆಳಕುಕೊಡುವದೇವಾತಾಶಕ್ತಿಯೆಂದರೇಸೂರ್ಯ. ಸೂರ್ಯಬ್ರಹ್ಮಾಂಡದಕಣ್ಣು. ಸೂರ್ಯಬೆಳಕುಕೊಟ್ಟುರೇಮಾತ್ರನಮ್ಮಕಣ್ಣುಈಜಗತ್ತನ್ನುನೋಡುತ್ತದೆ. ಬೆಳಕಿಗೆನಮ್ಮಕಣ್ಣೀಗೆಅಭಿಮಾನದೇವತೆಸೂರ್ಯ. ಅದೇರೀತಿಕಿವಿಗಳಿಗೆ ? ಚಂದ್ರ, ಮೂಗು-ಅಶ್ವಿದೇವತೆಗಳು, ನಾಲಿಗೆ ? ವರುಣ, ಕರಗಳು ? ಇಂದ್ರ, ಕಾಲು ? ಶನಿ (ಜ್ಯೋತಿಷಶಾಸ್ತ್ರಪ್ರಕಾರ) ಜೀರ್ಣವ್ಯವಸ್ಥೆ ? ಅಗ್ನಿಹೀಗೆಯೇಶರೀರದಲ್ಲಿಕೆಲಸಮಾಡುವಎಲ್ಲಇಂದ್ರಿಯಗಳನ್ನು ನಿಯಂತ್ರಣೆ ಮಾಡುವ ದೇವತಾಶಕ್ತಿಯ ಬಗ್ಗೆ ತಿಳಿಯುವ ಶಾಸ್ತ್ರವೇ ’ಆಧಿದೈವ ವಿಜ್ಞಾನ’.

4. ಆದಿಯಜ್ಞ ವಿಜ್ಞಾನ
ಆದಿ-ದೈವ ವಿಜ್ಞಾನದಲ್ಲಿ ಜೀವಿಯ ಪ್ರತಿ ಇಂದ್ರಿಯವನ್ನುನಿಯಂತ್ರಣೆಮಾಡತಕ್ಕದೇವತಾಶಕ್ತಿಯ ಬಗ್ಗೆ ತಿಳಿದಿದ್ದೇವೆ. ಇಲ್ಲಿ ಇಂದ್ರಿಯಾಭಿಮಾನಿ ದೇವತೆಗಳು ಯಾರ ಆಜ್ಞಾನುಸಾರವಾಗಿ ಜೀವಿಯ ಇಂದ್ರಿಯಗಳನ್ನು ನಿಯಂತ್ರಣೆ ಮಾಡುತ್ತಾರೆ? ಯೆನ್ನುವ ವಿಷಯವನ್ನು ಅಧ್ಯಯನಮಾಡುವ ವಿಜ್ಞಾನ ಶಾಸ್ತ್ರವೇಆದಿಯಜ್ಞವಿಜ್ಞಾನಶಾಸ್ತ್ರ. ಇಲ್ಲಿ ಒಂದು ಉದಾಹರಣೆಯನ್ನು ನೋಡೋಣ. ಕಣ್ಣಿನಲ್ಲಿ ಏನಾದರೂ ಧೂಳು ಬೀಳುವಾಗಕಣ್ಣನ್ನುಕಯ್ಯಿಂದಮುಚ್ಚುತ್ತೇವೆ. ಕಾಲಿನಲ್ಲಿ ಏನಾದರೂ ಮುಳ್ಳು ಚುಚ್ಚಿದಾಗ ಬೇಗ ಕಯ್ಯಿತೆಗಿಲಿಕ್ಕೆ ಹೋಗುತ್ತದೆ. ಕಣ್ಣಿನ ಅಭಿಮಾನೆ ದೇವತೆ ಸೂರ್ಯ ಕಯ್ಯಿಯ ದೇವತೆ ಇಂದ್ರ. ಇವರಿಬ್ಬರ ಮದ್ಯ ಎಷ್ಟು ಮೈತ್ರಿ ಇದೆ (ಅo-ಔಡಿಜiಟಿಚಿಣioಟಿ)! ಈ ಎರಡು ಇಂದ್ರಿಯಗಳಿಗೆಸಮನ್ವಯವನ್ನುಕಲ್ಪಿಸಿಕೆಲಸಮಾಡುವಂತೆ ಮಾಡುವ ಮೂಲಕಾರಕ ಯಾರು ಅಂತ ತಿಳಿಯುವ ಶಾಸ್ತ್ರವೇ ’ಆಧಿ-ಯಜ್ಞವಿಜ್ಞಾನ. ಸೃಷ್ಟಿ, ಸ್ಥಿತಿ, ಲಯಗಳಪ್ರೇರಕನಾದ ಭಗವಂತ ಎಲ್ಲಾ ಇಂದ್ರಿಯಾಭಿಮಾನದೇವತೆಗಳನ್ನುನಿಯಂತ್ರಣೆಮಾಡುತ್ತಾನೆ. “ಇಂದ್ರಿಯಾಭಿಮಾನಿದೇವತೆಗಳೆಲ್ಲ ಭಗವಂತನ ಆಜ್ಞಾನುಸಾರವಾಗಿಯೇಜೀವಿಯ ಇಂದ್ರಿಯಗಳನ್ನು ನಿಯಂತ್ರಣೆ ಮಾಡುತ್ತಾರೆ” ಯೆನ್ನುವ ಸತ್ಯವನ್ನು ತಿಳಿಯುವ ಶಾಸ್ತ್ರವೇ ಆಧಿ-ಯಜ್ಞ ವಿಜ್ಞಾನ.

5. ಬ್ರಹ್ಮ ವಿಜ್ಞಾನ
ಮನುಷ್ಯನ ಭೌತಿಕಶರೀರ, ಮನಸ್ಸು, ಬುದ್ಧಿ, ಅಧ್ಯಾತ್ಮ ಪ್ರಯಾಣವನ್ನುಇಂದ್ರಿಯಾಭಿಮಾನಿಯದೇವತೆಗಲ ಮೂಲಕ ನಿಯಂತ್ರಣೆ ಮಾಡುವ ಭಗವಂತನೇ ಇಡೀ ಜಗತ್ತಲ್ಲಿರುವ ಎಲ್ಲ ಜಡ-ಜೀವರಾಶಿಗಳನ್ನುಪ್ರಭಾವಿತಮಾಡುತ್ತಾನೆಯೆನ್ನುವ ಸತ್ಯವನ್ನು ತಿಳಿಯುವ ಶಾಸ್ತ್ರವೇ ಬ್ರಹ್ಮ ವಿಜ್ಞಾನ. ಈ ಶಾಸ್ತ್ರದಲ್ಲಿ ಸ್ಥಿತಿಕಾರಕನಾದ ಭಗವಂತನ ಸರೋತ್ತಮತ್ವವನ್ನು, ಪರಮಾರ್ಥ ತತ್ವವನ್ನು ಅಧ್ಯಯನ ಮಾಡಬಹುದು.

6. ಕರ್ಮವಿಜ್ಞಾನ
ಇಲ್ಲಿಯವರಿಗೂ ಮೇಲೆ ತಿಳಿಸಿದ ೫ವಿಜ್ಞಾನಶಾಸ್ತ್ರಗಳಆಧಾರವಾಗಿ ಜೀವಿಯ ಶರೀರವನ್ನುನಿಯಂತ್ರಣೆ ಮಾಡುವ ಇಂದ್ರಿಯಗಳು, ಇಂದ್ರಿಯಗಳನ್ನು ನಿಯಂತ್ರಣ ಮಾಡುವ ಇಂದ್ರಿಯಾಭಿಮಾನಿ ದೇವತೆಗಳು. ಆ ದೇವತಾಶಕ್ತಿಯನ್ನು ಕೂಡಾ ನಿಯಂತ್ರಣೆ ಮಾಡುವ ಭಗವಂತನನ್ನು ಅಧ್ಯಯನ ಮಾಡುವ ವಿಜ್ಞಾನಶಾಸ್ತ್ರಗಳ ಬಗ್ಗೆ ತಿಳಿದಿದ್ದೇವೆ. ಇವೆಲ್ಲವನ್ನುತಿಳಿದಮೇಲೆ ಮತ್ತೊಂದು ಹೊಸ ಪ್ರಶ್ನೆ ಉದಯಿಸುತ್ತದೆ. ಅದೇನಂದರೇ ಭಗವಂತ ಇಂದ್ರಿಯಾಭಿಮಾನಿಗಳ ಮೂಲಕ ಜೀವಿಯ ಶರೀರವನ್ನುಯೇಕೆನಿಯಂತ್ರಣೆ ಮಾಡುತ್ತಾನೆ? ಇದಕ್ಕೆ ಸಮಾಧಾನ ನಾವುವೇದೋಪನಿಷತುಗಳಲ್ಲಿ ಕಾಣಬಹುದು. ಜೀವಿಯ ಶುಭ-ಪಾಪ ಕರ್ಮಗಳಆಧಾರವಾಗಿನಿಯಂತ್ರಣೆ ಪ್ರಕ್ರಿಯೆ ಕೇಂದ್ರೀಕೃತವಾಗಿರುತ್ತೆ. ಕರ್ಮವಿಜ್ಞಾನದ ಬಗ್ಗೆ ಒಂದು ಸಣ್ಣ ಉದಾಹರಣೆ ನೋಡೋಣ.
ಒಂದು ಆನೆ ಬೆಂಗಳೂರಿನಿಂದ ಮೈಸೂರು ಕಡೆ ಪ್ರಯಾಣ ಮಾಡುತ್ತಿದೆ. ಆ ಆನೆಯಶರೀರದಮೇಲೆ ಹತ್ತು ಇರುವೆಗಳು (Ants) ಮೈಸೂರು ಕಡೆ ಆನೆಮೇಲೆ ಪ್ರಯಾಣ ಮಾಡುತ್ತಿವೆ. ಇಲ್ಲಿ ಪ್ರಶ್ನೆ ಏನಂದರೇಇರುವೆಗಳ ಓಡಾಟದಿಂದ ಮೈಸೂರು ಬಂತಾ? ಇಲ್ಲ ಆನೆಯ ಓಡಾಟದಿಂದ ಮೈಸೂರು ಬಂತಾ? ಆನೆಯ ನಡಿದಾಟದಿಂದ ಮೈಸೂರು ಬಂದಿದೆ ಅಂತ ಹೇಳಬಹುದು. ಇರುವಿಗಳು ಆನೆಯ ಶರೀರದ ಮೇಲೇ ಎಷ್ಟು ನಡಿದರೂ, ದಿಶೆ ಬದಲಾಯಿಸಿದರು ಆನೆ ಹೊರಡುವ ಗಮ್ಯಕ್ಕೆ ಸೇರಿಕೊಳ್ಳುತ್ತವೆ ಹಾಗೆಯೇ ಈ ಕಾಲಚಕ್ರವುಆನೆಯಂತೆತಿರುಗುತ್ತಿದೆ. ನಾವೆಲ್ಲರೂ ಕಾಲಚಕ್ರದಲ್ಲಿ ಸೇರಿಕೊಂಡು ಪ್ರಯಾಣ ಮಾಡುವ ಇರುವೆಗಳು. ಕಾಲಚಕ್ರವುನಿರ್ಧಾರಿಸಿದಗಮ್ಯವೇ ನಮ್ಮ ಗಮ್ಯ. ಈ ಪರಮಾರ್ಥ ತತ್ವವನ್ನು, ಜೀವಿಯ ಆನಾದಿಯಾಗಿರುವ ಕರ್ಮವನ್ನು ತಿಳಿಯುವ ಶಾಸ್ತ್ರವೇ ಕರ್ಮ ವಿಜ್ಞಾನ ಶಾಸ್ತ್ರ.
ವೇದಗಳಿಗೆಕಣ್ಣಾಗಿರುವಜ್ಯೋತಿಷಶಾಸ್ತ್ರದ ಅನುಸಾರವಾಗಿ ಮೇಲೆ ತಿಳಿಸಿದಂತಹ ಆರು ವಿಜ್ಞಾನಶಾಸ್ತ್ರಗಳನ್ನು ಅಧ್ಯಯನ ಮಾಡುವದು ಸುಲಭ. ಮನುಷ್ಯನ ಗಮ್ಯಸ್ಥಾನ, ಭಗವಂತನ ಸರ್ವೋತ್ತಮತ್ವವನ್ನುತಿಳಿಯುವದೇಮನುಷ್ಯನ ಸಾಧನೆ. ಜೀವನ ತತ್ವವನ್ನು ಪರಿಪೂರ್ಣವಾಗಿ ಅಧ್ಯಯನಮಾಡುವುದಕ್ಕೆಸಹಾಯಮಾಡುವ ಏಕೈಕ ಶಾಸ್ತ್ರ ಪ್ರತ್ಯಕ್ಷ-ಜ್ಯೋತಿಷಶಾಸ್ತ್ರ. ಜ್ಯೋತಿಷಶಾಸ್ತ್ರವನ್ನು ಅಧ್ಯಾತ್ಮಿಕ ದೃಕ್ಪದದಲ್ಲಿ (Spiritual Angle) ಅಧ್ಯಯನಮಾಡಿದರೇ ಭಗವಂತನ ಅಸ್ಥಿತ್ವವನ್ನು, ಪರಮಾರ್ಥತತ್ವವನ್ನು, ಲೋಕ-ಕಲ್ಯಾಣಕ್ಕಾಗಿತಾನುಮಾಡುವಮಹಾಕರ್ಮವನ್ನು, ಜೀವಿಯು ಭಗವಂತನ ಸೇರಬೇಕಾದ ಮಾರ್ಗ, ಸಾಧನೆಯನ್ನು ತಿಳಿಯಬಹುದು.

ಶ್ರೀಕೃಷ್ಣಾರ್ಪಣಮಸ್ತು

 
Leave a comment

Posted by on 25/01/2015 in Vedic Astrology

 

Free Astrology Online Counseling Services

img3348062

       This is a free online Astrological counseling service to help people who are suffering from the genuine problems. The People who are suffering from problem (Genuine) can send email along with Date of Birth, Time Of Birth and Place of Birth to below eMail ID

vaiswanara3@gmail.com

I will send reply after analyzing the Horoscope.

Birth Information

Provide Correct Date of Birth. (Don’t Provide Birth date as per School Records)

Birth Time (24 hours format)

Birth Place (also provide Nearby City or town name)

Elaborate your problem

Important Note:

This is not a commercial Prediction providing service. We analyze and provide services of the following genuine problems

  • Matitel Delay
  • Match Making
  • Health Disturbance
  • General Mind Disturbances
  • Muhurtha for Marriage & Upanayana

I will definitely respond to your problem if it is genuine. Please do not ask mundane questions.

Srikanth Dharmavaram

 
2 Comments

Posted by on 11/05/2011 in Vedic Astrology

 
 
Follow

Get every new post delivered to your Inbox.